Saturday, June 6, 2026
Homeಕರಾವಳಿಬೆಳ್ತಂಗಡಿ; ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾ ನದಿಗೆ ಬಿದ್ದು ಮಹಿಳೆ ಸಾವು

ಬೆಳ್ತಂಗಡಿ; ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾ ನದಿಗೆ ಬಿದ್ದು ಮಹಿಳೆ ಸಾವು

- Advertisement -
- Advertisement -

ಬೆಳ್ತಂಗಡಿ: ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಪರಿಣಾಮ ಮಹಿಳೆ ಸಾವನ್ನಪ್ಪಿದ ಘಟನೆ ಮುಂಡಾಜೆ ಸಮೀಪ ನಡೆದಿದೆ. .

ಬೆಳ್ತಂಗಡಿ ತಾಲೂಕಿನ ಕಾಜೂರಿನಲ್ಲಿ ನಡೆಯುತಿದ್ದ ಉರೂಸ್ ಕಾರ್ಯಕ್ರಮಕ್ಕೆ ಕಕ್ಕಿಂಜೆಯಿಂದ ಅಟೋ ರಿಕ್ಷಾದಲ್ಲಿ ಫೇ.3 ರಂದು ರಾತ್ರಿ ತೆರಳುತಿದ್ದಾಗ ಮುಂಡಾಜೆ ಕಾಪು ಚಡಾವಿನಲ್ಲಿ ನಿಯಂತ್ರಣ ತಪ್ಪಿ KA-70-5461 ಸಂಖ್ಯೆಯ ರಿಕ್ಷಾ ಅಬುಬಕ್ಕರ್ ಸಿದ್ದಿಕ್ ಅವರ ಆಟೋ ನಿಯಂತ್ರಣ ತಪ್ಪಿ  ಮೃತ್ಯುಂಜಯ ನದಿ ಪ್ರಪಾತಕ್ಕೆ  ಉರುಳಿ ಬಿದಿದ್ದು ಅದರಲ್ಲಿದ್ದ ಕಕ್ಕಿಂಜೆ ಕತ್ತರಿಗುಡ್ಡೆಯ ಸಫೀಯ(57) ಎಂಬವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಆಟೋದಲ್ಲಿ ಉಳಿದ ಪ್ರಯಾಣಿಕರಾದ ಮಹಮ್ಮದ್ ಆಶ್ರಫ್ ,ಮರಿಯಮ್ಮ ರಿಗೆ  ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!