Thursday, May 2, 2024
Homeತಾಜಾ ಸುದ್ದಿಮಗುವಿನ ನಿರೀಕ್ಷೆಯಲ್ಲಿದ್ದಾರೆ ಕೇರಳದ ತೃತೀಯ ಲಿಂಗ ದಂಪತಿ; ಇದು ದೇಶದಲ್ಲೇ ಮೊದಲ ಪ್ರಕರಣ

ಮಗುವಿನ ನಿರೀಕ್ಷೆಯಲ್ಲಿದ್ದಾರೆ ಕೇರಳದ ತೃತೀಯ ಲಿಂಗ ದಂಪತಿ; ಇದು ದೇಶದಲ್ಲೇ ಮೊದಲ ಪ್ರಕರಣ

spot_img
- Advertisement -
- Advertisement -

ಕೇರಳದ ತೃತೀಯ ಲಿಂಗ ದಂಪತಿ ಇದೀಗ ದೇಶದ ಗಮನ ಸೆಳೆದಿದ್ದಾರೆ. ಈ ತೃತೀಯ ಲಿಂಗ ಜೋಡಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ, ಇದು ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಟ್ರಾನ್ಸ್​ಜೆಂಡರ್​ ಗರ್ಭ ಧರಿಸಿರುವ ಪ್ರಕರಣವಾಗಿದೆ.

ಕೇರಳದ ಸಹದ್ ಫಾಜಿಲ್ ಮತ್ತು ಜಿಯಾ ಪಾವಲ್ ಜೋಡಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸಹದ್ ಕೆಲವೇ ದಿನಗಳಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ. ಇದೀಗ ದಂಪತಿಯ ಮೆಟರ್ನಿಟಿ ಫೋಟೋಶೂಟ್ ಫೋಟೋಗಳನ್ನು ಜಿಯಾ ಪಾವಲ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಇನ್​​ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡ ಈ ದಂಪತಿ, ತಂದೆ-ತಾಯಿಯಾಗುವ ಕನಸು ನಮ್ಮದಾಗಿತ್ತು. ಈಗ ನಮ್ಮ ಹಂಬಲವು ಈಡೇರುತ್ತಿದೆ. ನಾನು ಹೆಣ್ಣು ಅಲ್ಲ, ಆದರೂ ಹೆಣ್ತನ, ತಾಯ್ತನವನ್ನು ಅರಿತಿದ್ದೇನೆ. ನನ್ನೊಳಗೆ ಸದಾ ಅಮ್ಮನಾಗುವ ಕನಸಿತ್ತು. ಸಮಯವು ಅವೆಲ್ಲವನ್ನು ಅರಿತಿತ್ತು. ಹೊಟ್ಟೆಯಲ್ಲಿ ಗಂಡು ಅಥವಾ ಹೆಣ್ಣಾಗಲಿ 9 ತಿಂಗಳ ಕಾಲ ಕಾಯಬೇಕು. ಈ ವಿಚಾರ ನನಗೆ ಖುಷಿ ಕೊಡುತ್ತಿದೆ ಎಂದಿ ಜಿಯಾ ಸಂತಸವನ್ನು ಹಂಚಿಕೊಂಡಿದ್ದಾರೆ.

ಇನ್ನು ಮಗುವನ್ನು ದತ್ತು ಪಡೆಯಲು ಪ್ರಯತ್ನಿಸಲಾಗಿದ್ದರೂ, ಟ್ರಾನ್ಸ್ಜೆಂಡರ್ ದಂಪತಿಗೆ ಕಾನೂನು ಪ್ರಕ್ರಿಯೆಯು ಸವಾಲಾಗಿತ್ತು. ಆಗ ಸಹದ್ ಗೆ ಗಂಡಾಗಿದ್ದರೂ ಗರ್ಭಿಣಿಯಾಗುವ ಯೋಚನೆ ಬರುತ್ತದೆ. ಜನರು ಏನು ಹೇಳುತ್ತಾರೋ ಎಂಬ ಆತಂಕದಲ್ಲಿ ಆರಂಭದಲ್ಲಿ ಹಿಂಜರಿಯುತ್ತಿದ್ದೆ. ಅಲ್ಲದೆ ಒಮ್ಮೆ ಕೈಬಿಟ್ಟ ಸ್ತ್ರೀತ್ವಕ್ಕೆ ಮರಳುವುದು ಒಂದು ಸವಾಲಾಗಿ ಪರಿಣಮಿಸಿತು. ಆದರೆ ಝೀಯಾಳ ಪ್ರೀತಿ ಮತ್ತು ತಾಯಿಯಾಗಬೇಕೆಂಬ ಅದಮ್ಯ ಬಯಕೆ ಸಹದ್ ನಿರ್ಧಾರವನ್ನೇ ಬದಲಿಸಿತು. ಕೋಝಿಕ್ಕೋಡ್ ಮೆಡಿಕಲ್ ಕಾಲೇಜಿನ ವೈದ್ಯರ ಮಾರ್ಗದರ್ಶನದಲ್ಲಿ ತಜ್ಞ ಪರೀಕ್ಷೆಗಳನ್ನು ನಡೆಸಿ ಆರೋಗ್ಯ ಸಮಸ್ಯೆ ಇಲ್ಲ ಎಂದು ಖಚಿತಪಡಿಸಿಕೊಂಡ ನಂತರ ಚಿಕಿತ್ಸೆ ಆರಂಭಿಸಿ ಸಹದ್ ತಾಯಿಯಾಗಿದ್ದಾರೆ.

ಸಹದ್ ಹೆಣ್ಣಿನಿಂದ ಗಂಡಾಗಿ ಪರಿವರ್ತನೆಯ ಭಾಗವಾಗಿ, ಸ್ತನಗಳನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಲಾಯಿತು. ಆದರೆ ಗರ್ಭಾಶಯ ಇತ್ಯಾದಿಗಳನ್ನು ಬದಲಾಯಿಸಲಾಗಿಲ್ಲ. ಗಡುವು ಮಾರ್ಚ್ 4 ಆಗಿದೆ. ಹಾಲಿನ ಬ್ಯಾಂಕ್ ಮೂಲಕ ಮಗುವಿಗೆ ಹಾಲುಣಿಸಲು ನಿರ್ಧರಿಸಲಾಗಿದೆ. ಝೀಯಾ ಒಬ್ಬ ನರ್ತಕಿ. ಸಹದ್ ಖಾಸಗಿ ಸಂಸ್ಥೆಯೊಂದರಲ್ಲಿ ಅಕೌಂಟೆಂಟ್ ಆಗಿದ್ದಾರೆ.

- Advertisement -
spot_img

Latest News

error: Content is protected !!