Tuesday, July 14, 2026
Homeಕರಾವಳಿಉಡುಪಿಉಡುಪಿ: ಆಟೋ ರಿಕ್ಷಾಕ್ಕೆ ಲಾರಿ ಡಿಕ್ಕಿ, ಆಟೋ ಚಾಲಕ ಸಾವು

ಉಡುಪಿ: ಆಟೋ ರಿಕ್ಷಾಕ್ಕೆ ಲಾರಿ ಡಿಕ್ಕಿ, ಆಟೋ ಚಾಲಕ ಸಾವು

- Advertisement -
- Advertisement -

ಉಡುಪಿ: ಆಟೋ ರಿಕ್ಷಾಕ್ಕೆ ಲಾರಿ ಡಿಕ್ಕಿಯಾಗಿ ಆಟೋ ಚಾಲಕ ಸಾವನ್ನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಬೈಪಾಸ್ ಬಳಿ ಇಂದು ಬೆಳಗ್ಗೆ ಸಂಭವಿಸಿದೆ. ಹೆಜಮಾಡಿ ಮಾಸ್ತಿಕಟ್ಟೆ ನಿವಾಸಿ ರಫೀಕ್ (37) ಮೃತ ಆಟೋ ಚಾಲಕ.

ರಫೀಕ್ ಇಂದು ಮುಂಜಾನೆ ಮನೆಯಿಂದ ಮಸೀದಿಗೆ ರಿಕ್ಷಾದಲ್ಲಿ ತೆರಳಿದ್ದರು. ಈ ವೇಳೆ ಹೆಜಮಾಡಿ ಬೈಪಾಸ್ ಬಳಿ ಮಂಗಳೂರು ಕಡೆಯಿಂದ ಬಂದ ಲಾರಿಯೊಂದು ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ರಫೀಕ್ ಅವರನ್ನು ಕೂಡಲೇ ಸ್ಥಳೀಯರು ಅಸ್ಪತ್ರೆಗೆ ಸಾಗಿಸಿದ್ದು, ಈ ವೇಳೆ ಮೃತಪಟ್ಟಿದ್ದಾರೆ. ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!