Thursday, June 4, 2026
Homeಕರಾವಳಿಪುತ್ತೂರು; ಆಟೋದಲ್ಲಿ ಗಾಂಜಾ ಸಾಗಿಸುತ್ತಿದ್ದ ಆಟೋ ಚಾಲಕನ ಬಂಧನ

ಪುತ್ತೂರು; ಆಟೋದಲ್ಲಿ ಗಾಂಜಾ ಸಾಗಿಸುತ್ತಿದ್ದ ಆಟೋ ಚಾಲಕನ ಬಂಧನ

- Advertisement -
- Advertisement -

ಪುತ್ತೂರು; ಆಟೋದಲ್ಲಿ ಗಾಂಜಾ ಸಾಗಿಸುತ್ತಿದ್ದ ಆಟೋ ಚಾಲಕನನ್ನು ಪೊಲೀಸರು ಬಂಧಿಸಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ.  ಕಡಬ ತಾಲೂಕಿನ ಸವಣೂರು ನಿವಾಸಿ ಪ್ರಸಾದ್ ಇ (35) ಬಂಧಿತ ಆರೋಪಿ.

ಪ್ರಸಾದ್ ದಿನಾಂಕ:08-11-2025 ರಂದು ಮಧ್ಯಾಹ್ನ, ಸವಣೂರು ಕಡೆಯಿಂದ ಪುತ್ತೂರು ಕಡೆಗೆ ಆಟೋ ರಿಕ್ಷಾ ಒಂದರಲ್ಲಿ ನಿಷೇದಿತ ಮಾದಕ ವಸ್ತು ಗಾಂಜಾವನ್ನು ಸಾಗಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ, ಪುತ್ತೂರು ನಗರ ಪೊಲೀಸ್‌ ಠಾಣಾ ಪೊಲೀಸ್‌  ಉಪನಿರೀಕ್ಷಕರಾದ ಜನಾರ್ಧನ ಕೆ.ಎಂ ರವರು ಸಿಬ್ಬಂದಿಯೊಂದಿಗೆ ತೆರಳಿ  ಆಟೋ ರಿಕ್ಷಾವನ್ನು ತಡೆದು ಪರಿಶೀಲಿಸಿದಾಗ, ಸುಮಾರು 1 ಕೆಜಿ ಗಿಂತಲೂ ಮೇಲ್ಪಟ್ಟ ನಿಷೇದಿತ ಮಾದಕ ವಸ್ತು ಗಾಂಜಾ ಹಾಗೂ ಮಾರಕಾಯುಧವಾದ ಸುಮಾರು ಅಂದಾಜು 25 ಇಂಚು ಉದ್ದದ ತಲವಾರು ಪತ್ತೆಯಾಗಿರುತ್ತದೆ ಈ ಬಗ್ಗೆ ಪುತ್ತೂರು ನಗರ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಪೊಲೀಸರು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

- Advertisement -

Latest News

error: Content is protected !!