Saturday, June 6, 2026
Homeಕರಾವಳಿವಿಟ್ಲ; ದನ ಅಡ್ಡ ಬಂದು ರಿಕ್ಷಾ ಅಪಘಾತ

ವಿಟ್ಲ; ದನ ಅಡ್ಡ ಬಂದು ರಿಕ್ಷಾ ಅಪಘಾತ

- Advertisement -
- Advertisement -

ವಿಟ್ಲ: ದನ ಅಡ್ಡ ಬಂದು ರಿಕ್ಷಾ ಅಪಘಾತವಾಗಿರುವ ಘಟನೆ ವಿಟ್ಲ ಸಮೀಪ ಸಾರಡ್ಕ – ಪುಣಚ ರಸ್ತೆಯ ತೋರಣಕಟ್ಟೆಯ ಸೊಸೈಟಿಯ ಸಮೀಪ ನಡೆದಿದೆ.

ಆಜೇರು ನಿವಾಸಿ ಶಾಂತಾರಾಮ ರಾವ್ ಅವರು ರಿಕ್ಷಾದಲ್ಲಿ ಬೆಳಗ್ಗೆ ತೋರಣಕಟ್ಟೆಯಿಂದ ಪರಿಯಲ್ತಡ್ಕಕ್ಕೆ ಹಾಲು ತೆಗೆದುಕೊಂಡು ಹೋಗುತ್ತಿದ್ದಾಗ ಘಟನೆ ನಡೆದಿದೆ.

ಘಟನೆಯಿಂದ ರಿಕ್ಷಾದಲ್ಲಿ ಇದ್ದ ಸುಮಾರು 50 ಲೀಟರ್ ಹಾಲು ರಸ್ತೆಗೆ ಚೆಲ್ಲಿದೆ. ರಿಕ್ಷಾ ಚಾಲನೆ ಮಾಡುತ್ತಿದ್ದ ಶಾಂತಾರಾಮ ಅವರು ಸಣ್ಣಪುಟ್ಟ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಇಳಿಜಾರು ಪ್ರದೇಶದಲ್ಲಿ ರಸ್ತೆಗೆ ಏಕಾಏಕಿ ದನ ಅಡ್ಡ ಬಂದಿದ್ದು, ತಪ್ಪಿಸಲು ಹೋಗುವ ಸಂದರ್ಭ ರಿಕ್ಷಾ ರಸ್ತೆಯ ಪಕ್ಕಕ್ಕೆ ಮಗುಚಿದೆ ಎನ್ನಲಾಗಿದೆ.

- Advertisement -

Latest News

error: Content is protected !!