Thursday, June 4, 2026
Homeಕರಾವಳಿಉಡುಪಿಮಲ್ಪೆ: ಹಳೇ ದ್ವೇಷದ ಕಾರಣದಿಂದ ವ್ಯಕ್ತಿಯ ಕೊಲೆಗೆ ಯತ್ನ, ಆರೋಪಿಗಳು ಪರಾರಿ !

ಮಲ್ಪೆ: ಹಳೇ ದ್ವೇಷದ ಕಾರಣದಿಂದ ವ್ಯಕ್ತಿಯ ಕೊಲೆಗೆ ಯತ್ನ, ಆರೋಪಿಗಳು ಪರಾರಿ !

- Advertisement -
- Advertisement -

ಮಲ್ಪೆ: ಅಂಬಾಗಿಲಿನ ಇಜಾಜ್ ಎಂಬವರನ್ನು ಹಳೇ ದ್ವೇಷದ ಕಾರಣದಿಂದ ಕೊಲೆ ಮಾಡಲು ಯತ್ನಿಸಿರುವುದಾಗಿ ಹೂಡೆಯ ನಿವಾಸಿಗಳಾದ ಸನದ್ ಹಾಗೂ ಸದಾಪ್ ಎಂಬಿಬ್ಬರ ವಿರುದ್ಧ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ .

ಇಜಾಜ್ ಅವರು ತಮ್ಮ ಬೈಕ್ ನಲ್ಲಿ ಆಪ್ಟಿಲ್ ಎಂಬಾತನನ್ನು ಕಾಲೇಜಿಗೆ ಬಿಡಲು ಕಲ್ಯಾಣಪುರಕ್ಕೆ ಹೋಗಿದ್ದರು. ಕಾಲೇಜು ಕ್ಯಾಂಟೀನ್ ಬಳಿ ಅಡಗಿ ಕುಳಿತಿದ್ದ ಸದಾಪ್ ಹಾಗೂ ಸನದ್ ಹಳೇ ದ್ವೇಷದಿಂದ ಕೊಲೆ ಮಾಡುವ ಉದ್ದೇಶದಿಂದ ಸೋಡಾದ ಬಾಟಲಿಯ ತುಂಡಿನಿಂದ ಇಜಾಜ್ ಅವರಿಗೆ ಚುಚ್ಚಲು ಪ್ರಯತ್ನಿಸಿದ್ದಾರೆ.

ಈ ವೇಳೆ ಇಜಾಜ್ ಅವರು ಹೇಗೋ ತಪ್ಪಿಸಿಕೊಂಡಿದ್ದಾರೆ . ಬಳಿಕ ಆರೋಪಿಗಳು ಇಜಾಜ್ ಅವರಿಗೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ್ದಾರೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

- Advertisement -

Latest News

error: Content is protected !!