Sunday, June 7, 2026
Homeಅಪರಾಧಡಯಟ್ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ: ಕತ್ತಿ ಬೀಸಿದ್ದ ಮಾನಸಿಕ ಅಸ್ವಸ್ಥನಿಂದ ಆತ್ಮಹತ್ಯೆಗೆ...

ಡಯಟ್ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ: ಕತ್ತಿ ಬೀಸಿದ್ದ ಮಾನಸಿಕ ಅಸ್ವಸ್ಥನಿಂದ ಆತ್ಮಹತ್ಯೆಗೆ ಯತ್ನ!

- Advertisement -
- Advertisement -

ಮಂಗಳೂರು: ವೆನ್ ಲಾಕ್ ಆಸ್ಪತ್ರೆಯ ಜೈಲ್ ವಾರ್ಡ್ ನಲ್ಲಿದ್ದ ಸೋಮವಾರ ಆರೋಪಿಯೊಬ್ಬ ಆತ್ಮಹತ್ಯೆಗೆ ವಿಫಲ ಯತ್ನ ನಡೆಸಿದ್ದಾನೆ.

ಕೆಲ ದಿನಗಳ ಹಿಂದೆ ಕೊಡಿಯಾಲಬೈಲಿನ ಡಯಟ್ ಶಿಕ್ಷಣ ಸಂಸ್ಥೆಗೆ ನುಗ್ಗಿ ಅಲ್ಲಿದ್ದ ಸಿಬಂದಿ ಮೇಲೆ ಕತ್ತಿಯಿಂದ ಕೊಲ್ಲಲು ಬಂದಿದ್ದ ಮಾನಸಿಕ ಅಸ್ವಸ್ಥನಾದ ಕುಂದಾಪುರ ಮೂಲದ ನವೀನ್ ಕುಮಾರ್ (28) ಇಂದು ವೆನ್ ಲಾಕ್ ಆಸ್ಪತ್ರೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದವನಾಗಿದ್ದಾನೆ.

ಮಂಗಳೂರಿನ ವೆನ್ ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಎರಡು ದಿನಗಳ ಹಿಂದೆ ಮಾನಸಿಕ ಸಮಸ್ಯೆಗೆ ಚಿಕಿತ್ಸೆ ಪಡೆಯಲೆಂದು ದಾಖಲಾಗಿದ್ದ. ಬೆಡ್ ನಲ್ಲಿ ಮಲಗಿದ್ದ ವ್ಯಕ್ತಿ ಇಂದು ಸಂಜೆ ಕಿಟಕಿಗೆ ಬೆಡ್ ಶೀಟನ್ನು ಕಟ್ಟಿ ಕುತ್ತಿಗೆಗೆ ಸಿಕ್ಕಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಅಷ್ಟರಲ್ಲಿ ಸಿಬಂದಿ ಈತನನ್ನು ಗಮನಿಸಿದ್ದು, ಆತನನ್ನು ತಡೆದಿದ್ದಾರೆ. ಸದ್ಯ ನವೀನ್ ಕುಮಾರ್ ಅಪಾಯದಿಂದ ಪಾರಾಗಿದ್ದು ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.

- Advertisement -

Latest News

error: Content is protected !!