Thursday, March 28, 2024
Homeಕರಾವಳಿಜೆ.ಸಿ.ಐ BIZCON -2021 : ಅಶ್ವಿನ್ ಶೇಖ ಕುಡುಂಬೂರು ಅವರಿಗೆ ಪ್ರತಿಷ್ಠಿತ "ಜೆ. ಸಿ."ಸಾಧನಶ್ರೀ" ಪ್ರಶಸ್ತಿ!

ಜೆ.ಸಿ.ಐ BIZCON -2021 : ಅಶ್ವಿನ್ ಶೇಖ ಕುಡುಂಬೂರು ಅವರಿಗೆ ಪ್ರತಿಷ್ಠಿತ “ಜೆ. ಸಿ.”ಸಾಧನಶ್ರೀ” ಪ್ರಶಸ್ತಿ!

spot_img
- Advertisement -
- Advertisement -

ಮಂಗಳೂರು : ಇತ್ತೀಚಿಗೆ ಕುಂದಾಪುರದಲ್ಲಿ ನಡೆದ ಜೆ. ಸಿ. ಐ. (ಜೂನಿಯರ್ ಚೇಂಬರ್ ಇಂಟರ್ ನ್ಯಾಶನಲ್) BIZCON -2021 ಕಾರ್ಯಕ್ರಮದಲ್ಲಿ ನಲ್ಯಗುತ್ತು ಅಶ್ವಿನ್ ಶೇಖ ಕುಡುಂಬೂರು ಅವರಿಗೆ ಜೆ. ಸಿ. ಐ.ಯ ಪ್ರತಿಷ್ಠಿತ “ಜೆ. ಸಿ.”ಸಾಧನಶ್ರೀ ” ಪ್ರಶಸ್ತಿಯನ್ನು ಪ್ರಧಾನಿಸಲಾಯಿತು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು JFP ಸಮದ್ ಖಾನ್ ಅವರು ವಹಿಸಿದ್ದರು, ಅಥಿತಿಗಳಾಗಿ ಉದ್ಯಮಿ ಸುರೇಂದ್ರ ಶೆಟ್ಟಿ , ವಲಯ ಅಧ್ಯಕ್ಷೆ ಜೆಸಿ ಸೌಜನ್ಯ ಹೆಗ್ಡೆ ,ಜೆಸಿ ಜಾನ್ ಆರ್ ಡಿಸಿಲ್ವ ,ಜೆಸಿ ಕಾರ್ತಿಕೇಯ ಮಧ್ಯಸ್ಥ , ಉದ್ಯಮಿ ಅಬ್ದುಲ್ ಬಷೀರ್ ಕೋಟ ಮತ್ತು ಕುಂದಾಪುರ ಜೆಸಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮಂಗಳೂರಿನ ತಲ್ಲಂಗಡಿ ಬೀಡು ಕೀರ್ತಿಶೇಷ ರಘುವೀರ್ ಶೇಖ ಮತ್ತು ಶ್ರೀಮತಿ ಯಶೋಧರ ಆರ್ ಶೇಖ ದಂಪತಿಯ ಪುತ್ರನಾಗಿ 24 ಫೆಬ್ರವರಿ 1985 ರಂದು ಅಶ್ವಿನ್ ಶೇಕ ಜನಿಸಿದರು.

ಬಿ ಹೆಚ್ ಎಂ ಪದವೀಧರರು ಹಾಗೂ ಎಂಬಿಎ ಸ್ನಾತಕೋತ್ತರ ಪದವಿದರರು ಆಗಿರುವ ಅಶ್ವಿನ್ ಶೇಖ್ ಕುಡುಂಬೂರು ಅವರು 2002 ನೇ ಸಾಲಿನ ಸ್ಕೌಟ್ ರಾಷ್ಟ್ರಪತಿ ಪುರಸ್ಕೃತರು.

2011ನೇ ಸಾಲಿನಿಂದ ಶಿಕ್ಷಣ ವಲಯದಲ್ಲಿ ತಮ್ಮ ವೃತ್ತಿಯನ್ನು ತೊಡಗಿಸಿಕೊಂಡಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ದೇಶ ಹಾಗೂ ವಿದೇಶಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಆಧುನಿಕ ತಂತ್ರಜ್ಞಾದೊಂದಿಗೆ ಶಿಕ್ಷಣವನನ್ನು ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನೆಕ್ಸ್ಟ್ ಎಜುಕೇಷನ್ ಇಂಡಿಯಾ ಪ್ರೈ.ಲಿ. ಕಂಪೆನಿಯಲ್ಲಿ ಕಳೆದ 8 ವರ್ಷಗಳಿಂದ ತಮ್ಮ ಸೇವೆಯನ್ನು ದೇಶದಾದ್ಯಂತ ಸಲ್ಲಿಸುತ್ತಾ ಬಂದಿದ್ದಾರೆ. ಇದೀಗ ಅದೇ ಸಂಸ್ಥೆಯಲ್ಲಿ ಪ್ರಾದೇಶಿಕ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಜೇಸಿಐ ಗಣೇಶ್ ಪುರದ ಸಕ್ರೀಯ ಸದಸ್ಯರಾಗಿ ಹಾಗೂ ಸ್ವಾಗತ್ 2020 ಇವರಲ್ಲಿ ಬೆಸ್ಟ್ ಔಟ್ ಗೋಯಿಂಗ್ ಪಾರ್ಟಿಸಿಪೇಷನ್ ಆಗಿ ಹೊರಹೊಮ್ಮಿದ್ದಾರೆ.

ಇತ್ತೀಚಿಗೆ ಕುಂದಾಪುರದಲ್ಲಿ ನಡೆದ ಜೆ. ಸಿ. ಐ. (ಜೂನಿಯರ್ ಚೇಂಬರ್ ಇಂಟರ್ ನ್ಯಾಶನಲ್) BIZCON -2021 ಕಾರ್ಯಕ್ರಮದಲ್ಲಿ ಜೆ. ಸಿ. ಐ.ಯ ಪ್ರತಿಷ್ಠಿತ “ಜೆ. ಸಿ.”ಸಾಧನಶ್ರೀ ” ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಇವರು ಜೆಸಿಐ ಗಣೇಶ್ ಪುರ ಸದಸ್ಯರಿಗೆ ಡ್ರೆಸ್ಸಿಂಗ್ ಎಟಿಕ್ವಾಟ್ಸ್ ಬಗ್ಗೆ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳುವ ಜೊತೆಗೆ ವೃತ್ತಿಪರ ಮತ್ತು ವಿದ್ಯಾರ್ಥಿಗಳಿಗೆ ಹಲವಾರು ತರಬೇತಿ ಕಾರ್ಯಗಾರವನ್ನು ಮಾಡಿ ಯಶಸ್ವಿಗೊಂಡಿದ್ದಾರೆ. ಇದಲ್ಲದೆ ಇವರು ಸಾಮಾಜಿಕ, ದೈವಾರಾಧನೆ ಹಾಗೂ ಪರಿಸರ ಸಂರಕ್ಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಕುಡುಂಬೂರು ಶ್ರೀ ಕಲ್ಲುರ್ಟಿ ದೈವಸ್ಥಾನದ ಆಡಳಿತಗಾರರಾಗಿ, ಹರಿಪಾದೆ ಜಾರಾಂದಾಯ ದೈವಸ್ಥಾನ,ಪಾಂಡವಬೆಟ್ಟು ಕೋರ್ದಬ್ಬು ದೈವಸ್ಥಾನ ಹಾಗೂ ತಲ್ಲಂಗಡಿ ಬೀಡು ಅಣ್ಣಪ್ಪ ಪಂಜುರ್ಲಿ ದೈವಸ್ಥಾನದ ಎಲ್ಲಾ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಹಲವಾರು ಸಂಘ ಸಂಸ್ಥೆಗಳಿಗೆ ಪೋಷಕರು ಮತ್ತು ಮಾರ್ಗದರ್ಶಕರಾಗಿ ಬೆಂಬಲಿಸುತ್ತಿದ್ದಾರೆ.


- Advertisement -
spot_img

Latest News

error: Content is protected !!