- Advertisement -
![]()
- Advertisement -
ಉಡುಪಿ: ನಂದಿಕೂರಿನ ಈ ಬ್ಯಾಂಕ್ ನಲ್ಲಿ ಬ್ಯಾಂಕ್ ಸಿಸಿಟಿವಿ ವ್ಯವಸ್ಥೆ, ಸೈರನ್ ವ್ಯವಸ್ಥೆಗಳು ಕೆಟ್ಟು ಹೋಗಿದೆ. ಇದನ್ನೆಲ್ಲಾ ತಿಳಿದೋ ಗೊತ್ತಿಲ್ಲ ಬ್ಯಾಂಕ್ ಕಳವಿಗೆ ಯತ್ನ ನಡೆದಿದೆ. ನಂದಿಕೂರಿನ ಯೂನಿಯನ್ ಬ್ಯಾಂಕ್ ಶಾಖೆಯ ಕಿಟಕಿಯನ್ನು ಒಡೆದು ಕಳವು ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಕಳ್ಳರು ಇದರಲ್ಲಿ ಸೋತಿದ್ದಾರೆ.
ಶಾಖೆಯ ವೆಂಟಿಲೇಟರ್ ಕಿಟಕಿಯನ್ನು ಒಡೆದಿದ್ದರು. ಬ್ಯಾಂಕ್ ಸಿಬ್ಬಂದಿ ಬ್ಯಾಂಕ್ ತೆರೆದಾಗ ಘಟನೆ ಬೆಳಕಿಗೆ ಬಂದಿದೆ. ಆದರೆ, ಯಾವುದೇ ಕಳವು ಆಗಿಲ್ಲ ಎಂದು ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದು, ಇಲ್ಲಿನ ಬ್ಯಾಂಕ್ ಸಿಸಿಟಿವಿ ವ್ಯವಸ್ಥೆ, ಸೈರನ್ ವ್ಯವಸ್ಥೆಗಳನ್ನು ಕೂಡಲೇ ಸರಿಪಡಿಸಬೇಕೆಂದು ಕೇಳಿದ್ದಾರೆ. ಹಿಂದೊಮ್ಮೆ ನೋಟಿಸ್ ನೀಡಿದ್ದರೂ ಬ್ಯಾಂಕ್ ಕ್ರಮ ಕೈಗೊಂಡಿಲ್ಲ.
- Advertisement -


