Sunday, June 7, 2026
Homeಅಪರಾಧಪದ್ಮುಂಜ : ಮಲೆಂಗಲ್ಲು ಎಂಬಲ್ಲಿ ಮನೆ ಕಳ್ಳತನಕ್ಕೆ ವಿಫಲ ಯತ್ನ!

ಪದ್ಮುಂಜ : ಮಲೆಂಗಲ್ಲು ಎಂಬಲ್ಲಿ ಮನೆ ಕಳ್ಳತನಕ್ಕೆ ವಿಫಲ ಯತ್ನ!

- Advertisement -
- Advertisement -

ಪದ್ಮುಂಜ: ಕಳ್ಳರು ಕಳ್ಳತನಕ್ಕೆ ಸಂಚು ರೂಪಿಸಿ ವಿಫಲಗೊಂಡ ಘಟನೆ ಮಲೆಂಗಲ್ಲು ನಿವಾಸಿ ಅಬೂಬಕ್ಕರ್ ಎಂಬವರ ಮನೆಯಲ್ಲಿ ಆದಿತ್ಯವಾರದಂದು ರಾತ್ರಿ ನಡೆದಿದೆ.

ಮನೆಯ ಹಿಂಬದಿಯಲ್ಲಿರುವ ಕಿಟಕಿಗೆ ಬಿದಿರಿನ ಕೊಕ್ಕೆಯ ಮೂಲಕ ಒಳಗಿನಿಂದ ಹಾಕಿರುವ ಚಿಲಕವನ್ನು ಜಾರಿಸಿ ಬಾಗಿಲು ತೆರೆಯಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಎಚ್ಚರಗೊಂಡ ಮನೆಯವರು ಲೈಟ್ ಹಾಕಿದ್ದಾರೆ. ಕಳ್ಳರು ಕಳ್ಳತನಕ್ಕೆ ಉಪಯೋಗಿಸಿದ್ದ ಬಿದಿರಿನ ಕೊಕ್ಕೆ, ಕುರ್ಚಿ ಹಾಗೂ ಟಾರ್ಚ್ ಲೈಟನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಈ ಹಿಂದೆಯೂ ಒಮ್ಮೆ ಇದೇ ಮನೆಯಲ್ಲಿ ಮನೆಯವರು ಮಲಗಿದ್ದ ವೇಳೆ ಕಳ್ಳತನ ನಡೆದಿತ್ತು ಎನ್ನಲಾಗಿದೆ.

ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!