Friday, June 5, 2026
Homeಕರಾವಳಿವಿಟ್ಲದ ಉಕ್ಕುಡದಲ್ಲಿ ಯುವಕನ ಮೇಲೆ ಹಲ್ಲೆ

ವಿಟ್ಲದ ಉಕ್ಕುಡದಲ್ಲಿ ಯುವಕನ ಮೇಲೆ ಹಲ್ಲೆ

- Advertisement -
- Advertisement -

ವಿಟ್ಲ; ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆ ವಿಟ್ಲದ ಉಕ್ಕುಡದಲ್ಲಿ ನಡೆದಿದೆ, ಘಟನೆಯಲ್ಲಿ ಕೇಪು ಗ್ರಾಮದ ನಿವಾಸಿ ಹನೀಫ್ ಗಾಯಗೊಂಡಿದ್ದು ಅವರನ್ನು ತುಂಬೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಜ್ಪೆ ನಿವಾಸಿ ಮುಸ್ತಫಾ ಮತ್ತು ಹನೀಫ್ ವಿದೇಶದಲ್ಲಿದ್ದರು ಇರುವಾಗ ಕ್ರಿಕೆಟ್ ವಿಚಾರಕ್ಕೆ ಗಲಾಟೆ ನಡೆದು ವೈಷಮ್ಯ ಬೆಳೆದಿತ್ತು. ಬಳಿಕ ಈ ಬಗ್ಗೆ ರಾಜಿ ಸಂಧಾನ ಕೂಡ ನಡೆದಿತ್ತು.

ಇತ್ತೀಚೆಗೆ ಹನೀಫ್ ಊರಿಗೆ ಬಂದಿದ್ದರು.ಇನ್ನೆರಡು ದಿನಗಳಲ್ಲಿ ವಿದೇಶಕ್ಕೆ ಹೋಗುವ ಸಿದ್ದತೆಯಲ್ಲಿದ್ದರು.ಆದರೆ ನಿನ್ನೆ ವಿಟ್ಲ ಪೇಟೆಯಿಂದ ತೆರಳುವಾಗ ಮುಸ್ತಫಾ ಕಡೆಯವರು ಬಂದು ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂದು ಹನೀಫ್ ಆರೋಪಿಸಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

- Advertisement -

Latest News

error: Content is protected !!