Thursday, June 4, 2026
Homeಕರಾವಳಿವಿಟ್ಲ; ಕೋಳಿ ಅಂಕಕ್ಕೆ ಪೊಲೀಸರ ದಾಳಿ ಪ್ರಕರಣ; ಯುವಕನ ಮೇಲೆ ತಂಡವೊದರಿಂದ ಹಲ್ಲೆ

ವಿಟ್ಲ; ಕೋಳಿ ಅಂಕಕ್ಕೆ ಪೊಲೀಸರ ದಾಳಿ ಪ್ರಕರಣ; ಯುವಕನ ಮೇಲೆ ತಂಡವೊದರಿಂದ ಹಲ್ಲೆ

- Advertisement -
- Advertisement -

ವಿಟ್ಲ; ಯುವಕನ ಮೇಲೆ ತಂಡವೊಂದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ವಿಟ್ಲದ ಕಾವೇರಿ ಬಾರ್‌ನಲ್ಲಿ ನಡೆದಿದೆ.

 ಪೆರುವಾಯಿಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ವರುಣ್ ರೈ ಅಂತರಗುತ್ತು ನೇತೃತ್ವದಲ್ಲಿ ನಡೆಯುತ್ತಿದ್ದ ಅಕ್ರಮ ಕೋಳಿ ಅಂಕಕ್ಕೆ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ಮಾಡಿದ್ದರು.  ಈ ವಿಚಾರವಾಗಿ ಮೊನ್ನೆ ರಾತ್ರಿ ಬಾರ್‌ನಲ್ಲಿ ಯುವಕರ ನಡುವೆ ಮಾತಿನ ಚಕಾಮಕಿ ನಡೆದಿದೆ. ಈ ವೇಳೆ ಕೇಪು ನಿವಾಸಿ ಸುರೇಶ್ ಎಂಬಾತನ ಮೇಲೆ ರಾಕೇಶ್, ನಿಶಾಂತ್ ಹಾಗೂ ಚೇತನ್ ಎಂಬವರು ಹಲ್ಲೆ ನಡೆಸಿದ್ದಾರೆ.

ಹಲ್ಲೆಗೊಳಗಾದ ಸುರೇಶ್ ಗಂಭೀರ ಗಾಯಗೊಂಡಿದ್ದು ಕೂಡಲೇ ವಿಟ್ಲ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿ ಬಳಿಕ ತಲೆಗೆ ಗಂಭೀರ ಗಾಯವಾದ ಕಾರಣ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!