Tuesday, June 9, 2026
Homeಕರಾವಳಿಎರಡು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಕಳವಾಗಿದ್ದ ಬೈಕ್ ಬಂಟ್ವಾಳದಲ್ಲಿ ಪತ್ತೆ

ಎರಡು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಕಳವಾಗಿದ್ದ ಬೈಕ್ ಬಂಟ್ವಾಳದಲ್ಲಿ ಪತ್ತೆ

- Advertisement -
- Advertisement -

ಬಂಟ್ವಾಳ: ಎರಡು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಕಳವಾಗಿದ್ದ ಬೈಕ್  ಬಂಟ್ವಾಳದಲ್ಲಿ ಪತ್ತೆಯಾಗಿದೆ. ಟ್ರಾಫಿಕ್ ಪೋಲೀಸರ ಕಾರ್ಯಾಚರಣೆ ವೇಳೆ ಡ್ಯೂಕ್ ಬೈಕ್ ಪತ್ತೆಯಾಗಿದೆ.

ಪೊಲೀಸರ ವಾಹನ ತಪಾಸಣೆ ವೇಳೆ ಕಳವು ಮಾಡಿದ ಬೈಕ್ ಮೆಲ್ಕಾರ್ ಪೋಲೀಸ್ ಠಾಣಾ ವ್ಯಾಪ್ತಿಯ ಫರಂಗಿಪೇಟೆ ಎಂಬಲ್ಲಿ ಶುಕ್ರವಾರ ಪತ್ತೆಯಾಗಿದೆ.ಮೆಲ್ಕಾರ್ ಟ್ರಾಫಿಕ್ ಎಸ್.ಐ.ಸುತೇಶ್ ಅವರ ನೇತೃತ್ವದ ಪೋಲೀಸ್ ತಂಡ ಫರಂಗಿಪೇಟೆ ಎಂಬಲ್ಲಿ ಸಂಜೆ ವೇಳೆ ವಾಹನ ತಪಾಸಣಾ ನಡೆಸುತ್ತಿರುವ ವೇಳೆ ಬೈಕ್ ಪತ್ತೆಯಾಗಿದೆ.

ಡ್ಯೂಕ್ ಬೈಕಿನಲ್ಲಿ ಬರುತ್ತಿದ್ದ ಸವಾರನನ್ನು ತಪಾಸಣೆ ಮಾಡುವ ಉದ್ದೇಶದಿಂದ ನಿಲ್ಲಿಸಲು ಸೂಚಿಸಿದಾಗ , ಆತ ಬೈಕ್ ಬಿಟ್ಟು ಪರಾರಿಯಾಗಿದ್ದಾನೆ.ಆ ಬಳಿಕ ಬೈಕ್ ನ್ನು ವಶಪಡಿಸಿಕೊಂಡ ಪೊಲೀಸರು ಬೈಕಿನ ಬಗ್ಗೆ ತಪಾಸಣೆ ನಡೆಸಿದಾಗ ಬೈಕಿನ ಮೂಲ ವಾಹನ ಸಂಖ್ಯೆಯನ್ನು ಬದಲಾಯಿಸಲಾಗಿತ್ತು. ಒರಿಜಿನಲ್ ವಾಹನ ಸಂಖ್ಯೆ ಬೇರೆಯಾಗಿತ್ತು.

ವಾಹನದ ಇಂಜಿನ್ ಸಂಖ್ಯೆಯ ಆಧಾರದ ಮೇಲೆ ಪರಿಶೀಲನೆ ನಡೆಸಿದಾಗ ಇದು ಕಳವಾದ ಬೈಕ್ ಎಂಬುದು ಖಚಿತವಾಗಿದೆ.

2021 ರಲ್ಲಿ ಬೆಂಗಳೂರಿನಲ್ಲಿ ಈ ಬೈಕ್ ಕಳವಾಗಿರುವ ಮಾಹಿತಿ ಪಡೆದ ಪೋಲೀಸರು ಬೆಂಗಳೂರು ಪೊಲೀಸರಿಗೆ ಬೈಕ್ ನ್ನು ಹಸ್ತಾಂತರ ಮಾಡಲಿದ್ದಾರೆ.

- Advertisement -

Latest News

error: Content is protected !!