Thursday, June 4, 2026
HomeUncategorizedಕಾರ್ಕಳದ ಮಾಳದಲ್ಲಿ ಯುವಕನೋರ್ವನಿಗೆ ಚೂರಿ ಇರಿತ

ಕಾರ್ಕಳದ ಮಾಳದಲ್ಲಿ ಯುವಕನೋರ್ವನಿಗೆ ಚೂರಿ ಇರಿತ

- Advertisement -
- Advertisement -

ಕಾರ್ಕಳ; ಯುವಕನೊಬ್ಬನಿಗೆ ಚಾಕುವಿನಿಂದ ಇರಿದ ಘಟನೆ ಕಾರ್ಕಳದ ಮಾಳದಲ್ಲಿ ನಡೆದಿದೆ. ನಾಗರಾಜ್ ಪೂಜಾರಿ ಎಂಬವರಿಗೆ  ಭರತ್ ಎಂಬಾತ ಚೂರಿಯಿಂದ ಇರಿದಿದ್ದಾನೆ.

ನಾಗರಾಜ್ ಪೂಜಾರಿ ಹಾಗೂ ಭರತ್ ಆತ್ಮೀಯ ಸ್ನೇಹಿತರಾಗಿದ್ದು ಭರತ್ ನು ಕೈಯಲ್ಲಿ ಚೂರಿಯನ್ನು ಹಿಡಿದುಕೊಂಡಿದ್ದಕ್ಕೆ ನಾಗರಾಜ್ ಪೂಜಾರಿಯು ಚೂರಿಯನ್ನು ಕೈಯಲ್ಲಿ ಹಿಡಿದುಕೊಳ್ಳಬೇಡ ಎಂದು ಹೇಳಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಭರತ್ ನು ಕೈಯಲ್ಲಿದ್ದ ಚೂರಿಯಿಂದ ನಾಗರಾಜ್ ಹೊಟ್ಟೆಯ ಬಲಭಾಗಕ್ಕೆ ಇರಿದಿದ್ದಾನೆ.

ಕೂಡಲೇ ಗಾಯಗೊಂಡ ನಾಗರಾಜ್ ನನ್ನು ಕಾರ್ಕಳ ಆಸ್ಪತ್ರೆಗೆ ಕರೆತಂದಿದ್ದು ವೈದ್ಯರು ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿದ್ದಾರೆ. ಆದರೆ ನಿನ್ನೆ ವಾಪಾಸ್ಸು ನೋವು ಉಂಟಾಗಿದ್ದು ಸಂಜೆ ನಾಗರಾಜ್ ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!