Thursday, May 16, 2024
Homeಕರಾವಳಿಕೇರಳದಲ್ಲಿ ಯುವಕರಿಗೂ ಅರಿವಾಯ್ತು ಪೀರಿಯಡ್ಸ್ (ಮುಟ್ಟು) ಹೊಟ್ಟೆ ನೋವಿನ ಅನುಭವ

ಕೇರಳದಲ್ಲಿ ಯುವಕರಿಗೂ ಅರಿವಾಯ್ತು ಪೀರಿಯಡ್ಸ್ (ಮುಟ್ಟು) ಹೊಟ್ಟೆ ನೋವಿನ ಅನುಭವ

spot_img
- Advertisement -
- Advertisement -

ಕೇರಳ: ಪೀರಿಯಡ್ಸ್ ವೇಳೆ ಕಾಣಿಸಿಕೊಳ್ಳುವ ಹೊಟ್ಟೆನೋವು ಹೇಗಿರುತ್ತೆ, ಆ ಯಮಯಾತನೆಯನ್ನು ಸಹಿಸೋದು ಎಷ್ಟು ಕಷ್ಟ ಅನ್ನೋದು ಹೆಣ್ಣುಮಕ್ಕಳಿಗಷ್ಟೇ ಗೊತ್ತು. ಆದರೆ ಇದೀಗ ಕೇರಳದಲ್ಲಿ ಯುವಕರಿಗೂ ಈ ಅನುಭವವಾಗಿದೆ.

ಹೆಣ್ಣುಮಕ್ಕಳ ಪೀರಿಯಡ್ಸ್‌ ಅಥವಾ ಮುಟ್ಟಾಗುವಿಕೆಯ ಅನುಭವವನ್ನು ಯುವಕರಿಗೆ ಕೂಡ ಅನುಭವವಾಗವಂತಹ ಜಾಗೃತಿ ಕಾರ್ಯವನ್ನು ಕೇರಳದಲ್ಲಿ ಕೂಡ ಮಾಡಲಾಗಿದೆ.ಹಿಬಿ ಈಡೆನ್‌ ಅನ್ನೋ ಕೇರಳ ಸಂಸದ ಇಂಡಿಯನ್‌ ಮೆಡಿಕಲ್‌ ಅಸೋಷಿಯೇಷನ್‌ ಜೊತೆಗೆ ಈ ʻಕಪ್‌ ಆಫ್‌ ಲೈಫ್‌ʼ ಅನ್ನೋ ಅಭಿಯಾನ ನಡೆಸುತ್ತಿದ್ದಾರೆ.

ಅಭಿಯಾನದಲ್ಲಿ ಹೆಣ್ಣುಮಕ್ಕಳಿಗೆ ಪೀರಿಯಡ್ಸ್‌ ಆದಾಗ ಹೊಟ್ಟೆನೋವಾಗುತ್ತಲ್ಲ ಆ ರೀತಿ ಕೃತಕವಾಗಿ ಈ ಸೈಮುಲೇಟರ್‌ ಬಳಸಿ ಗಂಡುಮಕ್ಕಳಿಗೆ ಅದರ ಅನುಭವ ಆಗೋ ರೀತಿ ಮಾಡುತ್ತಿದ್ದಾರೆ. ಮಾಲ್‌ಗಳಲ್ಲಿ ಕಾಲೇಜ್‌ಗಳಲ್ಲಿ ಹೋಗಿ ಈ ಜಾಗೃತಿ ಮಾಡಿಸುತ್ತಿದ್ದಾರೆ.

ಪೀರಿಯಡ್ಸ್‌ ಅನ್ನೋದು ಯಾವುದೋ ಕೀಳು ವಿಚಾರ ಅಲ್ಲ. ಇದು ಕೂಡ ಹೆಣ್ಣುಮಕ್ಕಳ ದೇಹದಲ್ಲಿ ಆಗೋ ಸ್ವಾಭಾವಿಕ ಪ್ರಕ್ರಿಯೆ ಎಂದು ಯುವಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಈ ಮೂಲಕವಾದ್ರೂ ಮುಟ್ಟಿನ ಬಗೆಗಿನ ಕೀಳರಿಮೆ ದೂರವಾಗಲಿ ಅನ್ನೋದು ಈ ಅಭಿಯಾನದ ಉದ್ದೇಶ.

ಪೀರಿಯಡ್ಸ್‌ ಬಗ್ಗೆ ಇನ್ನು ಕೂಡ ಸಾಮಾಜದಲ್ಲಿ ಕೆಟ್ಟ ಭಾವನೆಗಳಿವೆ.‌ಜನರು ಈ ದೈಹಿಕ ಬೆಳವಣಿಗೆಗೆ ಕೆಟ್ಟ ರೀತಿಯಿಂದಲೂ ನೋಡುತ್ತಾರೆ.ಇದರಿಂದ ಈ ರೀತಿ ಜಾಗೃತಿ ಮೂಡಿಸಲಾಗುತ್ತಿದೆ.

- Advertisement -
spot_img

Latest News

error: Content is protected !!