Sunday, October 18, 2026
Homeಕರಾವಳಿಪುತ್ತೂರು :  ವಿಶೇಷ ಚೇತನ ವ್ಯಕ್ತಿಗೆ ಸೀಟು ಬಿಟ್ಟು ಕೊಡುವಂತೆ ಹೇಳಿದ್ದಕ್ಕೆ ನಿರ್ವಾಹಕಿಗೆ ಹಲ್ಲೆ; ಅಪ್ರಾಪ್ತನ...

ಪುತ್ತೂರು :  ವಿಶೇಷ ಚೇತನ ವ್ಯಕ್ತಿಗೆ ಸೀಟು ಬಿಟ್ಟು ಕೊಡುವಂತೆ ಹೇಳಿದ್ದಕ್ಕೆ ನಿರ್ವಾಹಕಿಗೆ ಹಲ್ಲೆ; ಅಪ್ರಾಪ್ತನ ಬಂಧನ

- Advertisement -
- Advertisement -

ಪುತ್ತೂರು : ವಿಶೇಷ ಚೇತನ ವ್ಯಕ್ತಿಗೆ ಸೀಟು ಬಿಟ್ಟುಕೊಡುವಂತೆ ಹೇಳಿದ್ದಕ್ಕೆ ಅಪ್ರಾಪ್ತ ಪ್ರಯಾಣಿಕನೊಬ್ಬ ಬಸ್ ನಿರ್ವಾಹಕಿಗೆ  ಹಲ್ಲೆ ನಡೆಸಿದ ಘಟನೆ ಪುತ್ತೂರಿನ ಬೊಳುವಾರಿನಲ್ಲಿ ನಡೆದಿದೆ. ಈ ಪುತ್ತೂರು ಮಹಿಳಾ ಠಾಣೆಯಲ್ಲಿ ಫೆ 20 ರಂದು  ಪ್ರಕರಣ ದಾಖಲಾಗಿದೆ.  

ಕೆಎಸ್‌ ಅರ್‌ ಟಿಸಿ ಬಸ್ಸು ನಿರ್ವಾಹಕಿ ವಿಜಯ ಹಲ್ಲೆಗೊಳಗಾದವರು. ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.  

ಪುತ್ತೂರಿನಿಂದ ಮಂಗಳೂರಿಗೆ ಹೋಗುವ ಬಸ್ಸಿನಲ್ಲಿ ವಿಶೇಷ ಚೇತನ ವ್ಯಕ್ತಿಯೊರ್ವರು ನಿಂತು ಪ್ರಯಾಣಿಸುತ್ತಿದ್ದರು. ಇದನ್ನು ಗಮನಿಸಿದ ನಿರ್ವಾಹಿಕಿ ವಿಜಯಾ, ಕೂತು ಪ್ರಯಾಣಿಸುತ್ತಿದ್ದ ಯುವಕನ ಬಳಿ ಸೀಟು ಬಿಟ್ಟು ಕೊಡುವಂತೆ ಕೇಳಿದ್ದಾರೆ . ಇದಕ್ಕೆ ಆತ ಆಕ್ಷೇಪಿಸಿದ್ದು ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಯುವಕ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆಂದು ನಿರ್ವಾಹಕಿ ಆರೋಪಿಸಿದ್ದಾರೆ.ವಿಜಯಾ ಅವರು ನೀಡಿದ ದೂರಿನಂತೆ ಆರೋಪಿಯನ್ನು ಬಂಧಿಸಲಾಗಿದೆ.

- Advertisement -

Latest News

error: Content is protected !!