Tuesday, October 13, 2026
Homeಕರಾವಳಿವಿಟ್ಲ; ಗ್ಯಾಸ್ ಹಾಕಿಲ್ಲ ಎಂದು ಅನ್ಯಕೋಮಿನ ವ್ಯಕ್ತಿಯ ತಂಡದಿಂದ ಹಲ್ಲೆ

ವಿಟ್ಲ; ಗ್ಯಾಸ್ ಹಾಕಿಲ್ಲ ಎಂದು ಅನ್ಯಕೋಮಿನ ವ್ಯಕ್ತಿಯ ತಂಡದಿಂದ ಹಲ್ಲೆ

- Advertisement -
- Advertisement -

ವಿಟ್ಲ; ಗ್ಯಾಸ್ ಹಾಕಿಲ್ಲ ಎಂದು ಅನ್ಯಕೋಮಿನ ವ್ಯಕ್ತಿಯ ತಂಡವೊಂದು ಗ್ಯಾಸ್ ಏಜೆನ್ಸಿಯಲ್ಲಿ ಕೆಲಸ ನಿರ್ವಹಿಸುವ ವ್ಯಕ್ತಿಯೋರ್ವರಿಗೆ ಹಲ್ಲೆ ನಡೆಸಿರುವ ಘಟನೆ ವಿಟ್ಲದ ಮೇಗಿನಪೇಟೆಯಲ್ಲಿ ನಡೆದಿದೆ.ವಿಟ್ಲದಲ್ಲಿರುವ ಚಿಕನ್ ಸೆಂಟರ್ ಮಾಲೀಕ ಸಮದ್ ಹಲ್ಲೆ ನಡೆಸಿದ ವ್ಯಕ್ತಿ.

ಸಮದ್  ಸಾಯಿ ಇಂಡಿಯನ್ ಗ್ಯಾಸ್ ಏಜೆನ್ಸಿ ಸಿಬ್ಬಂದಿ ಸದಾನಂದ ಎಂಬವರು ಕಮರ್ಷಿಯಲ್ ಗ್ಯಾಸ್ ಅನ್ನು ಮೇಗಿನಪೇಟೆಯಲ್ಲಿರುವ ಐಡಿಯಲ್ ಚಿಕನ್ ಸೆಂಟರ್‌ಗೆ ಕೊಂಡೊಯ್ಯುತ್ತಿದ್ದ ವೇಳೆ “ಮೊನ್ನೆ ಯಾಕೆ ಗ್ಯಾಸ್ ಹಾಕಿಲ್ಲವೆಂದು” ಗಲಾಟೆ ನಡೆಸಿದ್ದಾನೆ.ಆಗ ಸದಾನಂದ ಅವರು `ನಿನ್ನೆ ಮೊನ್ನೆಯೆಲ್ಲಾ ರಜೆ ಇತ್ತು‌. ಹಾಗಾಗಿ ಗ್ಯಾಸ್ ಹಾಕಿಲ್ಲವೆಂದು” ಹೇಳಿದ್ದಾರೆ. ಇಷ್ಟಕ್ಕೆ ಕೋಪಗೊಂಡ ಆತ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದು, ಆತನ ಜೊತೆಗಿದ್ದ ಚಿಕನ್ ಸೆಂಟರ್ ಸಿಬ್ಬಂದಿ ಕೂಡ ಹಲ್ಲೆ ನಡೆಸಿರುವುದಾಗಿ ತಿಳಿಸಿದ್ದಾರೆ. ಗ್ಯಾಸ್ ಡೆಲಿವರಿ ವಿಚಾರವಾಗಿ ಸಮದ್ ಇದಕ್ಕಿಂತ ಮೊದಲು ಫೋನ್ ಮಾಡಿ ಧಮ್ಕಿ ಹಾಕಿದ್ದರು ಎಂದು ಆರೋಪಿಸಲಾಗಿದೆ.

ಹಲ್ಲೆಗೊಳಗಾದ ವ್ಯಕ್ತಿ ವಿಟ್ಲ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆಂದು ತಿಳಿದು ಬಂದಿದೆ.

- Advertisement -

Latest News

error: Content is protected !!