Friday, June 26, 2026
Homeಕರಾವಳಿಉಡುಪಿಕಾರ್ಕಳ;  ಕಾರಿನಲ್ಲಿ ತೆರಳುತ್ತಿದ್ದ ಮಂಗಳೂರಿನ ಮೆಡಿಕಲ್ ಕಾಲೇಜೊಂದರ ವೈದ್ಯರು ಹಾಗೂ ತಂಡದ ಮೇಲೆ ಅನೈತಿಕ ಪೊಲೀಸ್...

ಕಾರ್ಕಳ;  ಕಾರಿನಲ್ಲಿ ತೆರಳುತ್ತಿದ್ದ ಮಂಗಳೂರಿನ ಮೆಡಿಕಲ್ ಕಾಲೇಜೊಂದರ ವೈದ್ಯರು ಹಾಗೂ ತಂಡದ ಮೇಲೆ ಅನೈತಿಕ ಪೊಲೀಸ್ ಗಿರಿ; ಐವರು ಹಿಂದೂ ಘಟನೆಯ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು

- Advertisement -
- Advertisement -

ಕಾರ್ಕಳ;  ಕಾರಿನಲ್ಲಿ ತೆರಳುತ್ತಿದ್ದ ಮಂಗಳೂರಿನ ಮೆಡಿಕಲ್ ಕಾಲೇಜೊಂದರ ವೈದ್ಯರು ಹಾಗೂ ಪ್ರಾಧ್ಯಾಪಕರ ಮೇಲೆ ಅನೈತಿಕ ಪೊಲೀಸ್ ಗಿರಿ ನಡೆಸಿದ  ಐವರು ಹಿಂದೂ ಘಟನೆಯ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ.

ಜುಲೈ 29 ರಂದು ಘಟನೆ ನಡೆದಿದ್ದು, ಘಟನೆ ಬೆಳಕಿಗೆ ಬರುತ್ತಿದ್ದಂತೆ  ಐವರು ಹಿಂದೂ ಸಂಘಟನೆಯೊಂದರ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಸಂತೋಷ್, ಕಾರ್ತಿಕ್ ಪೂಜಾರಿ, ಸುನಿಲ್ ಮೂಲ್ಯ, ಸಂದೀಪ್ ಪೂಜಾರಿ, ಸುಜಿತ್ ಸಫಲಿಗ ಎಂದು ಬಂಧಿತರು.

ಆರೋಪಿಗಳು ಮಂಗಳೂರಿನಿಂದ ಕಾರ್ಕಳದತ್ತ ಇಬ್ಬರು ಮಹಿಳಾ ಪ್ರೊಫೆಸರ್ ಗಳೊಂದಿಗೆ ಪ್ರಯಾಣಿಸುತ್ತಿದ್ದ ವೈದ್ಯರುಗಳನ್ನು ಕುಂಟಲ್ಪಾಡಿ ಎಂಬಲ್ಲಿ ತಡೆದು ಹಲ್ಲೆ ನಡೆಸಿದ್ದರು ಎನ್ನಲಾಗಿದೆ.ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ.

- Advertisement -

Latest News

error: Content is protected !!