Tuesday, May 7, 2024
Homeಕೊಡಗುಕೊಡಗು: ಗೋ ಮಾಂಸ ಸಾಗಿಸುತ್ತಿದ್ದಾನೆಂದು ಹೇಳಿ ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ

ಕೊಡಗು: ಗೋ ಮಾಂಸ ಸಾಗಿಸುತ್ತಿದ್ದಾನೆಂದು ಹೇಳಿ ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ

spot_img
- Advertisement -
- Advertisement -

ಕೊಡಗು: ಗೋ ಮಾಂಸ ಸಾಗಿಸುತ್ತಿದ್ದಾನೆಂದು ಹೇಳಿ ಮನೆಗೆ ಮಟನ್ ಕೊಂಡೊಯ್ಯುತ್ತಿದ್ದ  ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ ಮಾಡಿರುವ ಘಟನೆ ಕೊಡಗಿನ ಮಾದಾಪುರದಲ್ಲಿ ನಡೆದಿದೆ.

ಸಫ್ವಾನ್ (12) ಎಂಬ ಅಪ್ರಾಪ್ತ ಬಾಲಕನನ್ನು ಬಸ್ ನಿಂದ ಎಳೆದು ಹಾಕಿ  ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.

ಈ ಬಗ್ಗೆ ಎಸ್ ಡಿಪಿಐ ನಾಯಕ ಅಪ್ಸರ್ ಕೊಡ್ಲಿಪೇಟೆ ಟ್ವೀಟ್ ಮಾಡಿದ್ದು, ಕೊಡಗು ಜಿಲ್ಲೆಯ ಮಾದಾಪುರದಲ್ಲಿ ಹಬ್ಬದ ಪ್ರಯುಕ್ತ ಮನೆಗೆ 2 ಕೆ.ಜಿ ಮಟನ್ ಕೊಂಡೊಯುತ್ತಿದ್ದ 12 ವರ್ಷದ ಅಪ್ರಾಪ್ತ ಶಾಲಾ ಬಾಲಕನ ಮೇಲೆ ಹಲ್ಲೆ ನಡೆಸಿರುವ ಗೂಂಡಾಗಳನ್ನು ತಕ್ಷಣ ಬಂಧಿಸಿ ಕ್ರಮ ಕೈಗೊಂಡು ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂದು ‌ಆಗ್ರಹಿಸಿದ್ದಾರೆ.

- Advertisement -
spot_img

Latest News

error: Content is protected !!