Wednesday, June 24, 2026
Homeಕರಾವಳಿಪುತ್ತೂರು: ಕಾಂಗ್ರೆಸ್ ಮುಖಂಡನ ಮೇಲೆ ಇಬ್ಬರಿಂದ ಹಲ್ಲೆ

ಪುತ್ತೂರು: ಕಾಂಗ್ರೆಸ್ ಮುಖಂಡನ ಮೇಲೆ ಇಬ್ಬರಿಂದ ಹಲ್ಲೆ

- Advertisement -
- Advertisement -

ಪುತ್ತೂರು: ಕಾಂಗ್ರೆಸ್ ಮುಖಂಡರೊಬ್ಬರ ಮೇಲೆ ಇಬ್ಬರು ಹಲ್ಲೆ ಮಾಡಿರುವ ಘಟನೆ ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ತಿಂಗಳಾಡಿ ಎಂಬಲ್ಲಿ ನಡೆದಿದೆ.

ತಿಂಗಳಾಡಿ ನಿವಾಸಿ, ಸ್ಥಳೀಯ ಕಾಂಗ್ರೆಸ್ ಮುಖಂಡ ರಘುನಾಥ ರೈ ಹಲ್ಲೆಗೆ ಒಳಗಾದವರು. ಸ್ಥಳೀಯರಾದ ನಿಶಾಂತ್ ಮತ್ತು ವಿಜಿತ್ ಎಂಬವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ತಿಂಗಳಾಡಿಯ ಅಂಗಡಿಯೊಂದರ ಬಳಿ ರಘುನಾಥ ರೈ ಅವರು ನಿಂತಿದ್ದಾಗ ಅಲ್ಲಿಗೆ ಬಂದ ಆರೋಪಿಗಳು ಮಾತಿಗೆ ಮಾತು ಬೆಳೆಸಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದ್ದು, ಹಲ್ಲೆಯ ವೇಳೆಯಲ್ಲಿ ರಘುನಾಥ ರೈ ಅವರ ತಲೆಯನ್ನು ಹಿಡಿದು ಗೋಡೆಗೆ ಜಜ್ಜಲಾಗಿದ್ದು, ಗಂಭೀರ ಗಾಯಗೊಂಡ ರಘುನಾಥ ರೈ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಾಗದ ತಕರಾರಿಗೆ ಸಂಬಂಧಿಸಿ ಈ ಹಲ್ಲೆ ನಡೆದಿದೆ ಎನ್ನಲಾಗಿದೆ.

- Advertisement -

Latest News

error: Content is protected !!