Monday, April 29, 2024
Homeಕರಾವಳಿಮಂಗಳೂರುಲೋಕಸಭಾ ಚುನಾವಣೆಯ ಕರ್ತವ್ಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಲೋಕಸಭಾ ಚುನಾವಣೆಯ ಕರ್ತವ್ಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

spot_img
- Advertisement -
- Advertisement -

ಪುತ್ತೂರು; ಲೋಕಸಭಾ ಚುನಾವಣೆಯ ಕರ್ತವ್ಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಮೇಲೆ ಹಲ್ಲೆ ಮಾಡಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ.

ರೋಟರಿಪುರ ಅಂಗನವಾಡಿ ಕಾರ್ಯಕರ್ತೆ ಮತಚೀಟಿ ವಿತರಣೆಗಾಗಿ ಮತದಾರರ ಮನೆಯೊಂದಕ್ಕೆ ಹೋಗಿದ್ದರು. ಈ ವೇಳೆ ಇನ್ನೊಂದು ಮನೆಯಿಂದ ಹೊರ ಬಂದ ಮಹಿಳೆ ಅಂಗನವಾಡಿ ಕಾರ್ಯಕರ್ತೆಯೊಂದಿಗೆ ಮಾತನಾಡುತ್ತಿದ್ದ ವೇಳೆ ಆಕೆಯ ಮಗಳು ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಅಂಗನವಾಡಿ ಕಾರ್ಯಕರ್ತೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಅಂಗನಾಡಿ ಕಾರ್ಯಕರ್ತೆಗೆ ಹಲ್ಲೆ ನಡೆಸಿದ ಪ್ರಕರಣವನ್ನು ಅಂಗನವಾಡಿ ಕಾರ್ಯಕರ್ತರ ಮತ್ತು ಸಹಾಯಕಿಯರ ಸಂಘ ಖಂಡಿಸಿದೆ. ಪುತ್ತೂರು ತಾಲೂಕಿನಲ್ಲಿ ಹೆಚ್ಚಿನ ಅಂಗನವಾಡಿ ಕಾರ್ಯಕರ್ತೆಯವರು ಐಎಲ್‌ಓಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಘಟನೆಯಿಂದಾಗಿ ಎಲ್ಲಾ ಬಿಎಲ್ಓಗಳು ಭಯಬೀತರಾಗಿದ್ದಾರೆ. ಇಲಾಖೆಯ ಕೆಲಸದೊಂದಿಗೆ ಚುನಾವಣಾ ಕರ್ತವ್ಯವನ್ನು ಒತ್ತಡದಿಂದಲೇ ಮಾಡಬೇಕಾಗುತ್ತದೆ. ಬೂತ್ ಮಟ್ಟದ ಅಧಿಕಾರಿಗಳು ಓಟರ್ ಸ್ಲಿಪ್ ಮನೆ ಮನೆಗೆ ಹಂಚಲು ಒಬ್ಬೊಬ್ಬರೇ ಹೋಗಬೇಕಾಗಿರುತ್ತದೆ.  ನಮಗೆ ಯಾವುದೇ ರಕ್ಷಣೆ ಇರುವುದಿಲ್ಲ. ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಹೆಚ್ಚಿನ ಬಿಎಲ್‌ಓಗಳು ಅಸ್ವಸ್ಥರಾಗಿದ್ದಾರೆ. ಆದುದರಿಂದ ಮತದಾರರ ಚೀಟಿಯನ್ನು ಒಂದು ಕಡೆ ನಿಗದಿತ ಜಾಗದಲ್ಲಿ ವಿತರಿಸುವಂತೆ ನಾವು ಸಹಾಯಕ ಚುನಾವಣಾಧಿಕಾರಿ ಮತ್ತು ತಹಸೀಲ್ದಾರ್ ಅವರಿಗೆ ಮನವಿ ಮಾಡಲಿದ್ದೇವೆ ಎಂದು ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಸಂಘದ ಅಧ್ಯಕ್ಷೆ ಕಮಲ, ಜಿಲ್ಲಾಧ್ಯಕ್ಷೆ ತಾರಾ ಬಳ್ಳಾಲ್, ಮಾಜಿ ಜಿಲ್ಲಾಧ್ಯಕ್ಷೆ ಅರುಣಾ ಬಿ ಕೆ, ತಾಲೂಕು ಖಜಾಂಚಿ ಶೈಲಜಾ, ಮಾಜಿ ಕಾರ್ಯದರ್ಶಿ ಜಯಲತಾ, ಪ್ರಮೀಳಾ ರಾವ್ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!