Saturday, June 28, 2025
Homeತಾಜಾ ಸುದ್ದಿಬಹುನಿರೀಕ್ಷೆಯ 'ಅಟಲ್​ ಸುರಂಗ' ಲೋಕಾರ್ಪಣೆ-ಗಡಿ ಭದ್ರತೆಯ ನೆಲೆಯಲ್ಲಿ ದೇಶದಿಂದ ಬಹು ದೊಡ್ಡ ಸಂದೇಶ ರವಾನೆ!.

ಬಹುನಿರೀಕ್ಷೆಯ ‘ಅಟಲ್​ ಸುರಂಗ’ ಲೋಕಾರ್ಪಣೆ-ಗಡಿ ಭದ್ರತೆಯ ನೆಲೆಯಲ್ಲಿ ದೇಶದಿಂದ ಬಹು ದೊಡ್ಡ ಸಂದೇಶ ರವಾನೆ!.

spot_img
- Advertisement -
- Advertisement -

ಶಿಮ್ಲಾ: ಹಿಮಾಲಚ ಪ್ರದೇಶದ ರೋಹ್ಟಾಂಗ್​ನಲ್ಲಿ ನಿರ್ಮಿಸಲಾಗಿರುವ ವಿಶ್ವದಲ್ಲೇ ಅತಿ ಉದ್ದವಾದ ಅಟಲ್​ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಲೋಕಾರ್ಪಣೆಗೊಳಿಸಿದರು. ಕುದುರೆ ಲಾಳದ ಆಕಾರದ ಸುರಂಗ ಮಾರ್ಗವೂ ಲೇಹ್​ ಮತ್ತು ಮನಾಲಿ ನಡುವೆ ಸುಮಾರು 46 ಕಿ.ಮೀ ಅಂತರವನ್ನು ತಗ್ಗಿಸಲಿದೆ.

ಪ್ರಧಾನಿ ಮೋದಿ ಹಾಗು ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರು ಸುರಂಗ ಉದ್ಘಾಟನೆಗಾಗಿ ವಿಶೇಷ ವಿಮಾನದಲ್ಲಿ ಮನಾಲಿಗೆ ಆಗಮಿಸಿ ಉದ್ಘಾಟನೆ ನೆರವೇರಿಸಿದ್ದಾರೆ. ಸುರಂಗ ಕುರಿತು ಜನತೆಗೆ ಸಂದೇಶ ರವಾನಿಸಿರುವ ಪ್ರಧಾನಿ ಮೋದಿ “ಈ ಅಭಿವೃದ್ಧಿ ಯೋಜನೆನ್ನು ನೇರವಾಗಿಯೇ ಉದ್ಘಾಟಿಸುತ್ತೇನೆ. ಬಹುದೊಡ್ಡ ಉದ್ಘಾಟನಾ ಕಾರ್ಯಕ್ರಮವನ್ನು ನಡೆಸಬೇಕೆಂದು ಬಯಸಿದ್ದೆವು. ಆದರೆ, ಕರೊನಾ ವೈರಸ್​ನಿಂದಾಗಿ ಚಿಕ್ಕದಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ಗಡಿ ಭದ್ರತಾ ದೃಷ್ಟಿಯಿಂದ ಈ ಸುರಂಗವೂ ಬಹು ದೊಡ್ಡ ಸಂದೇಶವನ್ನು ರವಾನಿಸುತ್ತದೆ”ಎಂದು ನುಡಿದಿದ್ದಾರೆ.

- Advertisement -
spot_img

Latest News

error: Content is protected !!