Saturday, June 13, 2026
Homeತಾಜಾ ಸುದ್ದಿಲಡಾಖ್ ಗಡಿಯಲ್ಲಿ ಉದ್ವಿಗ್ನ ಸ್ಥಿತಿ: ಹುತಾತ್ಮರಾದ ಕನಿಷ್ಠ 20 ಭಾರತೀಯ ಸೈನಿಕರು

ಲಡಾಖ್ ಗಡಿಯಲ್ಲಿ ಉದ್ವಿಗ್ನ ಸ್ಥಿತಿ: ಹುತಾತ್ಮರಾದ ಕನಿಷ್ಠ 20 ಭಾರತೀಯ ಸೈನಿಕರು

- Advertisement -
- Advertisement -

ಲಡಾಕ್‌: ಪೂರ್ವ ಲಡಾಕ್‌ನ ಗಾಲ್ವಾನ್ ಕಣಿವೆಯಲ್ಲಿ ಚೀನಾದೊಂದಿಗೆ ಮುಖಾಮುಖಿಯಾಗಿ ನಡೆದ ಹಿಂಸಾಚಾರದಲ್ಲಿ ಕನಿಷ್ಠ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ANI ತಿಳಿಸಿವೆ.

ಸೋಮವಾರ ತಡರಾತ್ರಿ ನಡೆದ ಸಂಘರ್ಷದಲ್ಲಿ ಭಾರತೀಯ ಸೇನೆಯ ಓರ್ವ ಸೇನಾಧಿಕಾರಿ ಹಾಗೂ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಹೇಳಲಾಗಿತ್ತು. ಈಗ ಸಾವಿನ ಸಂಖ್ಯೆ ದಿಢೀರ್‌ ಏರಿಕೆಯಾಗಿರುವುದು ಸಂಘರ್ಷದ ಭೀಕರತೆಯನ್ನು ತೋರಿಸುತ್ತಿದೆ.

ಚೀನಾ ಸೇನೆಯ ಕಡೆ 43 ಸಾವು – ನೋವುಗಳು ಸಂಭವಿಸಿವೆ ಎಂದು ಸೇನಾ ಮೂಲಗಳಿಂದ ಗೊತ್ತಾಗಿದೆ. ಭಾರತ-ಚೀನಾ ಉನ್ನತ ಸೇನಾ ಕಮಾಂಡರ್‌ಗಳ ಸಭೆಯ ಬಳಿಕ ಗಡಿ ಉದ್ವಿಗ್ನತೆ ಕಡಿಮೆಯಾಗಿತ್ತು. ಪೂರ್ವ ಲಡಾಖ್ ಗಡಿಯಿಂದ ಸೈನ್ಯವನ್ನು ಹಿಂಪಡೆಯುವ ಪ್ರಕ್ರಿಯೆಗೂ ಚಾಲನೆ ನೀಡಲಾಗಿತ್ತು.

ಎಲ್​ಎಸಿ ಬಳಿ ಚೀನಾ ಸೈನಿಕರ ಮೃತದೇಹಗಳನ್ನು ಸಾಗಿಸಲು ಚೀನಾದ ಹೆಲಿಕಾಪ್ಟರ್​ ಹಾರಾಟ ಆರಂಭಿಸಿವೆ ಎನ್ನುವ ಮಾಹಿತಿಯೂ ಇದೆ.

ಕಳೆದ ಜೂನ್.15 ಮತ್ತು 16ರ ಮಧ್ಯರಾತ್ರಿ ನಡೆದ ಸಂಘರ್ಷದ ವೇಳೆ ಗಾಲ್ವಾನ್ ಗಡಿ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ 17 ಮಂದಿ ಭಾರತೀಯ ಯೋಧರಿಗೆ ಗಂಭೀರ ಗಾಯಗಳಾಗಿವೆ ಎಂದು ಭಾರತೀಯ ಸೇನೆಯು ಮಾಹಿತಿ ನೀಡಿದೆ. ಇದರ ಜೊತೆಗೆ ರಾಷ್ಟ್ರದ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ರಕ್ಷಿಸಲು ಭಾರತೀಯ ಸೇನೆಯು ಬದ್ಧವಾಗಿರುತ್ತದೆ ಎಂದು ಸೇನಾ ಮೂಲಗಳು ತಿಳಿಸಿವೆ.

- Advertisement -

Latest News

error: Content is protected !!