Thursday, June 4, 2026
Homeಕರಾವಳಿಉಡುಪಿಉಡುಪಿ: ಕುಂಭಾಶಿಯ ವಿಶ್ವಕರ್ಮ ಶಿಲ್ಪಕಲಾ ಕೇಂದ್ರಕ್ಕೆ ಅರುಣ್ ಯೋಗಿರಾಜ್ ಭೇಟಿ

ಉಡುಪಿ: ಕುಂಭಾಶಿಯ ವಿಶ್ವಕರ್ಮ ಶಿಲ್ಪಕಲಾ ಕೇಂದ್ರಕ್ಕೆ ಅರುಣ್ ಯೋಗಿರಾಜ್ ಭೇಟಿ

- Advertisement -
- Advertisement -

ಉಡುಪಿ: ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಂಡಿರುವ ಬಾಲರಾಮನ ಮೂರ್ತಿಯ ಶಿಲ್ಪಿ ಅರುಣ್ ಯೋಗಿರಾಜ್ ಉಡುಪಿ ಜಿಲ್ಲೆಗೆ ಭೇಟಿ ನೀಡಿದ್ದರು.

ಕುಂದಾಪುರ ತಾಲೂಕಿನ ಕುಂಭಾಶಿಯಲ್ಲಿರುವ ವಿಶ್ವಕರ್ಮ ಶಿಲ್ಪಕಲಾ ಕೇಂದ್ರಕ್ಕೆ ಅರುಣ್ ಯೋಗಿರಾಜ್ ಭೇಟಿ ನೀಡಿದ್ದರು.

ಕುಂಭಾಶಿಯ ವಿಶ್ವಕರ್ಮ ಶಿಲ್ಪಕಲಾ ಕೇಂದ್ರ ಅಯೋಧ್ಯೆಯ ಶ್ರೀ ರಾಮನಿಗಾಗಿ ರಥ ನಿರ್ಮಿಸುತ್ತಿದ್ದು, ರಾಷ್ಟ್ರಪ್ರಶಸ್ತಿ ವಿಜೇತ ರಥ ಶಿಲ್ಪಿಗಳಾದ ಲಕ್ಷ್ಮಿ ನಾರಾಯಣ ಆಚಾರ್ಯ ಮತ್ತು ರಾಜಗೋಪಾಲಾಚಾರ್ಯ ಅವರು ರಥ ನಿರ್ಮಾಣ ಮಾಡುತ್ತಿದ್ದಾರೆ.

ಶಿಲ್ಪಕಲಾ ಕೇಂದ್ರದಲ್ಲಿರುವ ಶ್ರೀ ರಾಮನ ಪಾದುಕೆಯ ಮಂದಿರಕ್ಕೆ ಭೇಟಿ ನೀಡಿದ ಅರುಣ್ ಯೋಗರಾಜ್ ಅವರನ್ನು ರಥ ಶಿಲ್ಪಿಗಳು ಗೌರವಿಸಿದರು.

ಇದೇ ವೇಳೆ ಅರುಣ್ ಯೋಗಿರಾಜ್ ಗೆ ವಿಶ್ವಕರ್ಮ ಸಮುದಾಯದ ಪ್ರಮುಖರಿಂದಲೂ ಗೌರವಾರ್ಪಣೆ ನಡೆಯಿತು. ಅರುಣ್ ಯೋಗಿರಾಜ್ ಭೇಟಿಯ ವಿಷಯ ತಿಳಿದು ಬಂದಿದ್ದ ಸಾರ್ವಜನಿಕರು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದರು.

- Advertisement -

Latest News

error: Content is protected !!