Saturday, April 27, 2024
Homeಕರಾವಳಿಅರುಣ್ ಉಳ್ಳಾಲ್ ‌ರವರಿಗೆ ಡಾಕ್ಟರೇಟ್

ಅರುಣ್ ಉಳ್ಳಾಲ್ ‌ರವರಿಗೆ ಡಾಕ್ಟರೇಟ್

spot_img
- Advertisement -
- Advertisement -

ಉಳ್ಳಾಲ: ಮಂಗಳೂರು ವಿಶ್ವವಿದ್ಯಾಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧಕ ಅರುಣ್ ಉಳ್ಳಾಲ್ ‌ರವರು ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ನಾಗಪ್ಪ ಗೌಡ ಆರ್. ಇವರ ಮಾರ್ಗದರ್ಶನದಲ್ಲಿ ಸಲ್ಲಿಸಿದ ‘ಭಗವತಿ ಆರಾಧನೆ- ಸಾಂಸ್ಕೃತಿಕ ಅಧ್ಯಯನ’ ಎಂಬ ಪಿಹೆಚ್ ಡಿ. ಮಹಾಪ್ರಬಂಧಕ್ಕೆ ವಿಶ್ವವಿದ್ಯಾಲಯವು ಉನ್ನತ ‘ಡಾಕ್ಟರೇಟ್’ ಪದವಿ ನೀಡಿ ಗೌರವಿಸಿದೆ.

ತೊಕ್ಕೊಟ್ಟಿನ ನಿವೃತ್ತ ಬಿಎಸ್ಎನ್ಎಲ್ ಉದ್ಯೋಗಿ ನಾಗೇಶ್ ತೊಕ್ಕೊಟ್ಟು ಮತ್ತು ದಿವ್ಯಾ ನಾಗೇಶ್ ದಂಪತಿಗಳ ಪುತ್ರರಾಗಿರುವ ಇವರು ಸದ್ಯ ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಕನ್ನಡ ವಿಭಾಗದ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ನಿರೂಪಣೆ, ಉಪನ್ಯಾಸ, ಬರವಣಿಗೆ ಸೇರಿದಂತೆ ಬಹುಮುಖ ಸಂಸ್ಕೃತಿಪರ ಕೆಲಸಗಳಿಂದ ಈಗಾಗಲೇ ಜನಮಾತಾಗಿರುವ ಅರುಣ್‌‌ರವರು ಜಿಲ್ಲೆಯಲ್ಲೇ ಮೊದಲ ಬಾರಿಗೆ ಧರ್ಮಸಂಸ್ಕಾರ ಶಿಕ್ಷಣದ ಪರಿಕಲ್ಪನೆಯನ್ನು ಪರಿಚಯಿಸಿ 400 ಕ್ಕೂ ಅಧಿಕ ವಿದ್ಯಾರ್ಥಿ ಮತ್ತು ಯುವಪೀಳಿಗೆಗೆ ಉಚಿತ ಧರ್ಮಶಿಕ್ಷಣ ನೀಡುತ್ತಿದ್ದಾರೆ.

- Advertisement -
spot_img

Latest News

error: Content is protected !!