Monday, June 8, 2026
Homeತಾಜಾ ಸುದ್ದಿವಿದ್ಯುತ್ ಸ್ಪರ್ಶಿಸಿ ಜ್ಯೂನಿಯರ್ ರವಿಚಂದ್ರನ್ ಖ್ಯಾತಿಯ ಕಲಾವಿದ ಸಾವು

ವಿದ್ಯುತ್ ಸ್ಪರ್ಶಿಸಿ ಜ್ಯೂನಿಯರ್ ರವಿಚಂದ್ರನ್ ಖ್ಯಾತಿಯ ಕಲಾವಿದ ಸಾವು

- Advertisement -
- Advertisement -

ತುಮಕೂರು : ಸಂಪ್‌ಗೆ ನೀರು ತುಂಬಿಸಲು ಮೋಟರ್ ಆನ್ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿ ಸಂಗೀತ ಸಂಜೆ ಕಾರ್ಯಕ್ರಮದ ಕಲಾವಿದನೋರ್ವ ಮೃತಪಟ್ಟಿರುವ ಘಟನೆ ತಾಲೂಕಿನ ಕಸಬಾ ಹೋಬಳಿ ಹೇರೂರು ಗ್ರಾಮದಲ್ಲಿ ನಡೆದಿದೆ. ಹೇರೂರು ಗ್ರಾಮದ ಲಕ್ಷ್ಮಿ ನಾರಾಯಣ (35) (ಜ್ಯೂನಿಯರ್ ರವಿಚಂದ್ರನ್) ಮೃತ ದುರ್ದೈವಿ.

ಜ್ಯೂನಿಯರ್ ರವಿಚಂದ್ರನ್ ಎಂದೇ ಪ್ರಸಿದ್ಧರಾಗಿದ್ದ ಸಂಗೀತ ಸಂಜೆ ಕಾರ್ಯಕ್ರಮದ ಕಲಾವಿದ ಲಕ್ಷ್ಮಿ ನಾರಾಯಣ ಇಂದು ತಮ್ಮ ಮನೆಯ ಸಂಪ್‌ಗೆ ನೀರು ತುಂಬಿಸಲೆಂದು ಮೋಟರ್ ಸ್ವಿಚ್ ಹಾಕಲು ಯತ್ನಿಸಿದ್ದಾರೆ ಎನ್ನಲಾಗಿದ್ದು, ಈ ವೇಳೆ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತ ಲಕ್ಷ್ಮಿ ನಾರಾಯಣ ರಾಜ್ಯದ ವಿವಿಧ ಜಿಲ್ಲಾ, ತಾಲೂಕು ಸೇರಿದಂತೆ ವಿವಿದೆಡೆ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಹಾಡು ಹೇಳುವುದರ ಜೋತೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರನ್ನು ಹೋಲುತ್ತಿದ್ದ ಅವರು ರವಿಚಂದ್ರನ್ ಅವರ ಅಭಿನಯವನ್ನು ಸೊಗಸಾಗಿ ಅಭಿನಯಿಸುವ ಮೂಲಕ ಜನರ ಮನೆ ಮಾತಾಗಿದ್ದರು.

- Advertisement -

Latest News

error: Content is protected !!