Saturday, June 6, 2026
Homeಕರಾವಳಿಮಾನನಷ್ಟ ಮೊಕದ್ದಮೆ: ಮಂಗಳೂರು ಲ್ಯಾಂಡ್‌ ಟ್ರೇಡ್ಸ್‌ನ ಮಾಲಕ ಶ್ರೀನಾಥ್‌ ಹೆಬ್ಬಾರ್‌ಗೆ ಗೆಲುವು

ಮಾನನಷ್ಟ ಮೊಕದ್ದಮೆ: ಮಂಗಳೂರು ಲ್ಯಾಂಡ್‌ ಟ್ರೇಡ್ಸ್‌ನ ಮಾಲಕ ಶ್ರೀನಾಥ್‌ ಹೆಬ್ಬಾರ್‌ಗೆ ಗೆಲುವು

- Advertisement -
- Advertisement -

ಮಂಗಳೂರು: ಲ್ಯಾಂಡ್‌ ಟ್ರೇಡ್ಸ್‌ ಬಿಲ್ಡರ್ ಮತ್ತು ಡೆವಲಪರ್ಸ್ ನ ಮಾಲಕ ಕೆ. ಶ್ರೀನಾಥ್‌ ಹೆಬ್ಬಾರ್‌ ಅವರ ವಿರುದ್ಧ ಲೇಖನಗಳನ್ನು ಬರೆದು ಮಾನನಷ್ಟ ಮಾಡಿರುವಂತಹ ಪ್ರಕರಣಕ್ಕೆ ಸಂಬಂಧಿಸಿದಂತೆ ಹನುಮಂತ ಕಾಮತ್‌ ಮತ್ತು ವೆಬ್‌ ನ್ಯೂಸ್‌ ಪೋರ್ಟಲ್‌ ತುಳುನಾಡು ನ್ಯೂಸ್‌ ವಿರುದ್ಧ ಮಂಗಳೂರು ಸಿಜೆಎಂ ನ್ಯಾಯಾಲಯವು ತೀರ್ಪು ನೀಡಿದ್ದು, 1.5 ಕೋ. ರೂ. ಮಾನನಷ್ಟ ಮೊತ್ತವನ್ನು ವನ್ನು 6 ತಿಂಗಳಿನೊಳಗೆ 2 ಕಂತಿನಲ್ಲಿ ಪಾವತಿಸುವಂತೆ ಆದೇಶವನ್ನು ಹೊರಡಿಸಿದೆ.

ವಾದ ಪ್ರತಿವಾದ ಆಲಿಸಿದಂತಹ ನ್ಯಾಯಾಲಯವು ಮುಂದಿನ ದಿನಗಳಲ್ಲಿ ಯಾವುದೇ ಮಾನನಷ್ಟ ಮಾಡುವ ರೀತಿಯಲ್ಲಿ ಮಾನಹಾನಿಕರ, ಸುಳ್ಳು, ದುರುದ್ದೇಶಪೂರಿತ ಲೇಖನ, ಹೇಳಿಕೆ ನೀಡದಂತೆ ಶಾಶ್ವತ ತಡೆಯಾಜ್ಞೆಯನ್ನು ಕೂಡ ನೀಡಿದೆ. ಮಾನನಷ್ಟ ಮೊತ್ತದ ಶೇ. 95ರಷ್ಟನ್ನು ಪ್ರಥಮ ಪ್ರತಿವಾದಿ ಹನುಮಂತ ಕಾಮತ್‌ ಹಾಗೂ ಉಳಿದ ಶೇ. 5ರಷ್ಟು ಮೊತ್ತವನ್ನು ಎರಡನೇ ಪ್ರತಿವಾದಿ ತುಳುನಾಡು ನ್ಯೂಸ್‌ ಅವರು ಪರಿಹಾರದ ರೂಪದಲ್ಲಿ ಪಾವತಿಸಬೇಕು ಎಂಬುದಾಗಿ 2021ರ ನ. 29ರಂದು ಮಂಗಳೂರು ಸಿಜೆಎಂ ಮತ್ತು ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಧರ್ಮಗಿರಿ ರಾಮಸ್ವಾಮಿ ಅವರು ಆದೇಶವನ್ನು ನೀಡಿದ್ದಾರೆ.

- Advertisement -

Latest News

error: Content is protected !!