Friday, April 19, 2024
Homeಕರಾವಳಿಉಡುಪಿದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಿಗೆ ಕೋವಿಡ್ ವ್ಯಾಕ್ಸಿನ್ ಆಗಮನ: ಅರೋಗ್ಯ ಇಲಾಖೆಯಿಂದ ಸ್ವಾಗತ

ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಿಗೆ ಕೋವಿಡ್ ವ್ಯಾಕ್ಸಿನ್ ಆಗಮನ: ಅರೋಗ್ಯ ಇಲಾಖೆಯಿಂದ ಸ್ವಾಗತ

spot_img
- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಗೆ ಬಹುನಿರೀಕ್ಷಿತ ಕೋವಿಡ್ ಲಸಿಕೆ ಆಗಮಿಸಿದ್ದು, ಅರೋಗ್ಯ ಇಲಾಖೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸ್ವಾಗತಿಸಲಾಯಿತು.

ಮಂಗಳೂರು ಪ್ರಾದೇಶಿಕ ಲಸಿಕಾ ಸಂಗ್ರಹಣಾ ಕೇಂದ್ರವಾದ ಕಾರಣಕ್ಕೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಸೇರಿದ ವ್ಯಾಕ್ಸಿನ್ ಅನ್ನು ಮಂಗಳೂರಿನಲ್ಲಿ ಸಂಗ್ರಹಿಸಲಾಗುತ್ತಿದೆ. ಇಲ್ಲಿಂದ ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ವ್ಯಾಕ್ಸಿನ್ ರವಾನೆ ಮಾಡಲಾಗುತ್ತದೆ.

ಮಂಗಳೂರಿಗೆ ಇಂದು 42,500 ಕೋವಿಡ್ ಲಸಿಕೆಗಳು ಬಂದಿದ್ದು, ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ 24,500, ಚಿಕ್ಕಮಗಳೂರು ಜಿಲ್ಲೆಗೆ 6,000 ಹಾಗು ಉಡುಪಿ ಜಿಲ್ಲೆಗೆ 12,000 ಕೋವಿಡ್ ಲಸಿಕೆ ಪೂರೈಕೆಗೆ ಅರೋಗ್ಯ ಇಲಾಖೆ ತೀರ್ಮಾನಿಸಿದೆ

ಬೆಂಗಳೂರಿನಿಂದ ಹೊರಟ ಆರೋಗ್ಯ ಇಲಾಖೆಯ ವಾಹನ‌ ಮೈಸೂರು ಜಿಲ್ಲೆಗೆ ತಲುಪಿ ಈ ಬಳಿಕ ಮಂಗಳೂರಿಗೆ‌ ಮುಂಜಾನೆ ಹೊತ್ತು ತಲುಪಿದೆ. ಜ.16 ರಂದು ಜಿಲ್ಲಾ ಮಟ್ಟದಲ್ಲಿ ಇದರ ಉದ್ಘಾಟನೆ ಜತೆಗೆ ಈ ಬಳಿಕ ನಿರಂತರ‌ ಲಸಿಕೆಯನ್ನು‌ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ನೀಡುವ ಕಾರ್ಯವಾಗಲಿದೆ.

- Advertisement -
spot_img

Latest News

error: Content is protected !!