ಚಿಕ್ಕಮಗಳೂರು: ಹೆಣ್ಣು ಮಕ್ಕಳ ಚಟಕ್ಕೆ ಬಿದ್ದು ಕಳ್ಳತನ ಮಾಡುತ್ತಿದ್ದ ವೃದ್ಧನನ್ನು ಪೊಲೀಸರು ಬಂಧಿಸಿದ್ದಾರೆ. ಮನೆಗಳ್ಳತನ ಪ್ರಕರಣ ಸಂಬಂಧ ತನಿಖೆ ನಡೆಸುವ ವೇಳೆ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಯನ್ನ ಬಂಧಿಸಿದ್ದಾರೆ. ಆರೋಪಿಯ ವಿಚಾರಣೆ ಸಂದರ್ಭದಲ್ಲಿ ಆತನ ಹೆಣ್ಣು ಮಕ್ಕಳ ಚಟ ಬಯಲಿಗೆ ಬಂದಿದೆ.
ರಮೇಶ್ (70) ಬಂಧಿತ ವೃದ್ಧ. ರಮೇಶ್ ಎರಡು ಮದುವೆಯಾಗಿದ್ದು, ಆತನಿಗೆ ಮೂರು ಮಕ್ಕಳಿದ್ದಾರೆ. ಆದರೂ ಈತನ ಆಸೆ ಕಡಿಮೆಯಾಗಿಲ್ಲ. ತನ್ನ ಚಟಕ್ಕೆ ಮನೆಯಲ್ಲಿ ಹಣ ಕೊಡಲಿಲ್ಲ ಎಂದು ಕಳ್ಳತನ ಮಾಡುವುದಕ್ಕೆ ಮುಂದಾಗಿದ್ದಾನೆ ಎನ್ನಲಾಗಿದೆ.
ಮನೆಗಳ್ಳತನ ಪ್ರಕರಣಗಳ ಸಂಬಂಧಗಳ ತನಿಖೆ ವೇಳೆ ಈತನ ಅಸಲಿತನ ಬಟಾಬಯಲಾಗಿದೆ. ಸಿಸಿಟಿವಿ (CCTV) ಆಧರಿಸಿ ವೃದ್ಧನ ಬಂಧನ ಮಾಡಲಾಗಿತ್ತು. ಬಳಿಕ ವಿಚಾರಣೆ ವೇಳೆ ಆರೋಪಿಯ ಹೆಣ್ಣು ಮಕ್ಕಳ ಚಟ ಬಯಲಿದೆ ಬಂದಿದೆ. ಎರಡು ಮದುವೆ, ಮೂರು ಮಕ್ಕಳಾದರೂ ಈತನ ಆಸೆ ಕಡಿಮೆ ಆಗಿರಲಿಲ್ಲವಂತೆ…!! ಅಲ್ಲದೇ ಮೂರನೆ ಮದುವೆಗೆ ಹೆಣ್ಣು ಹುಡುಕುತ್ತಿರುವುದಾಗಿಯೂ ಹೇಳಿದ್ದಾನೆ ಎನ್ನಲಾಗಿದೆ.
ತನ್ನ ಚಟಕ್ಕೆ ಮನೆಯಲ್ಲಿ ಹಣ ಕೊಡುತ್ತಿಲ್ಲ ಎಂಬ ಕಾರಣಕ್ಕೆ ಕಳ್ಳತನಕ್ಕೆ ತಾತ ಇಳಿದಿದ್ದ. ಮೂಲತಃ ಚಿಕ್ಕಮಗಳೂರಿನ ರಮೇಶ್ ಕಳೆದ 12 ವರ್ಷಗಳ ಹಿಂದೆ ಮನೆಯ ತೊರೆದು ತಮಿಳುನಾಡಿಗೆ ತೆರಳಿದ್ದ. ಸಣ್ಣಪುಟ್ಟ ಕಳ್ಳತನ ಮಾಡಿಕೊಂಡು ಬಂದ ಹಣದಲ್ಲಿ ವ್ಯಾಮೋಹ ತೀರಿಸಿಕೊಳ್ಳುತಿದ್ದ.