Friday, May 17, 2024
Homeಕರಾವಳಿಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಲೇಖನ ಪೋಸ್ಟ್- ಮಂಗಳೂರು ಮುಸ್ಲಿಂ ಪೇಜ್ ನ ವಿವರವಾದ ತನಿಖೆಯನ್ನು ಕೈಗೊಂಡ...

ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಲೇಖನ ಪೋಸ್ಟ್- ಮಂಗಳೂರು ಮುಸ್ಲಿಂ ಪೇಜ್ ನ ವಿವರವಾದ ತನಿಖೆಯನ್ನು ಕೈಗೊಂಡ ಸಿಐಡಿ

spot_img
- Advertisement -
- Advertisement -

ಮಂಗಳೂರು: ಶಿವಮೊಗ್ಗದಲ್ಲಿ ನಡೆದ ಹರ್ಷ ಹತ್ಯೆ ಹಾಗೂ ಇತರ ಕೆಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಲೇಖನ ಪೋಸ್ಟ್ ಮಾಡಿರುವ ಆರೋಪದ ಮೇಲೆ ‘ಮಂಗಳೂರು ಮುಸ್ಲಿಂ’ ಫೇಸ್‌ಬುಕ್ ಪೇಜ್‌ನ ವಿರುದ್ದ ಅಪರಾಧ ತನಿಖಾ ದಳ (ಸಿಐಡಿ) ತನಿಖೆ ಕೈಗೊಂಡಿದೆ.

‘ಮಂಗಳೂರು ಮುಸ್ಲಿಂ’ ಫೇಸ್‌ಬುಕ್ ಪೇಜ್‌ ರಾಜ್ಯ ಸಚಿವರೊಬ್ಬರ ವಿರುದ್ಧ ಆಕ್ಷೇಪಾರ್ಹ ಬರಹದ ಜೊತೆಗೆ ವಾಹಿನಿಯೊಂದರ ನಿರೂಪಕರಿಗೆ ಬೆದರಿಕೆ ಹಾಕಲಾಗಿದೆ ಎಂದು ಹೇಳಲಾಗಿದೆ. ಪೋಸ್ಟ್ ವೈರಲ್ ಆದ ನಂತರ, ನಗರ ಪೊಲೀಸರು ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿದ್ದಾರೆ. ಸಿಐಡಿ ಈ ಪೇಜ್‌ನ ವಿವರವಾದ ತನಿಖೆಯನ್ನು ಕೈಗೊಂಡಿದೆ.

ಕಟೀಲು ದೇವಸ್ಥಾನ ಮತ್ತು ಹಿಂದೂ ನಂಬಿಕೆಗಳ ಬಗ್ಗೆ ಕೆಲವು ಅವಹೇಳನಕಾರಿ ಕಾಮೆಂಟ್‌ಗಳ ಪೋಸ್ಟ್‌ಗೆ ಸಂಬಂಧಿಸಿದಂತೆ ಈ ಪೇಜ್‌ ಅನ್ನು 2016 ರಲ್ಲಿ ನ್ಯಾಯಾಲಯದ ಅನುಮತಿಯೊಂದಿಗೆ ನಿರ್ಬಂಧಿಸಲಾಗಿದೆ. ಆದರೆ ಹೆಸರು ಬದಲಾಯಿಸಿ ಹೊಸ ಪೇಜ್ ಅನ್ನು ತೆರೆಯಲಾಗಿದೆ.

ಇನ್ನು ಸಾಮಾಜಿಕ ಜಾಲತಾಣಗಳ ತಂಡವೊಂದು ಶಾಂತಿ ಕದಡಲು ಯತ್ನಿಸುತ್ತಿರುವ ಸಮಾಜ ವಿರೋಧಿ ಶಕ್ತಿಗಳ ಮೇಲೆ ಪೊಲೀಸರು ನಿಗಾ ಇರಿಸಿದ್ದು, ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದಿನದ 24 ಗಂಟೆಯೂ ಸಾಮಾಜಿಕ ಜಾಲತಾಣಗಳ ಜಾಗೃತ ತಂಡ ಕಾರ್ಯನಿರ್ವಹಿಸುತ್ತಿದೆ.

- Advertisement -
spot_img

Latest News

error: Content is protected !!