Tuesday, July 14, 2026
Homeಕರಾವಳಿತುಳು ಸಿನಿಮಾ ನಿರ್ದೇಶಕನಿಗೆ ವಂಚನೆ ಆರೋಪ: ಖ್ಯಾತ ಸ್ಯಾಂಡಲ್ ವುಡ್ ನಟಿ ವಿರುದ್ಧ ಜಾಮೀನು ರಹಿತ...

ತುಳು ಸಿನಿಮಾ ನಿರ್ದೇಶಕನಿಗೆ ವಂಚನೆ ಆರೋಪ: ಖ್ಯಾತ ಸ್ಯಾಂಡಲ್ ವುಡ್ ನಟಿ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್

- Advertisement -
- Advertisement -

ಮಂಗಳೂರು:  ತುಳು ಸಿನಿಮಾದ ನಿರ್ದೇಶಕೊಬ್ಬರಿಗೆ ವಂಚಿಸಿದ್ದಾರೆ ಎಂಬ ಆರೋಪಿಸಿದ್ದಾರೆ ಎಂದು ದೂರು ದಾಖಲಾದ ಹಿನ್ನೆಲೆ ಸ್ಯಾಂಡಲ್ ವುಡ್ ನ ಖ್ಯಾತ ಪೋಷಕ ನಟಿ ಪದ್ಮಜಾ ರಾವ್ ವಿರುದ್ಧ ಇದೀಗ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಲಾಗಿದೆ.

ನಟಿ ಪದ್ಮಜಾ ರಾವ್ ವಿರುದ್ಧ ಮಂಗಳೂರಿನ ಜೆಎಂಎಫ್ ಸಿ ನ್ಯಾಯಾಲಯವು ಚೆಕ್ ಬೌನ್ಸ್ ಪ್ರಕರಣದಲ್ಲಿ ಜಾಮೀನು ರಹಿತ ಬಂಧನದ ವಾರಂಟ್ ಜಾರಿ ಮಾಡಿದೆ. ಈ ಮೂಲಕ ನಟಿ ಪದ್ಮಜಾ ರಾವ್ ಗೆ ಇದೀಗ ಸಂಕಷ್ಟ ಶುರುವಾಗಿದೆ.

ನಟಿ ಪದ್ಮಜಾ ರಾವ್ ತುಳು ನಿರ್ದೇಶಕರೊಬ್ಬರಿಗೆ ನೀಡಿದ್ದಂತ ಚೆಕ್ ಬೌನ್ಸ್ ಪ್ರಕರಣ ಸಂಬಂಧ ಇಂದು ಮಂಗಳೂರಿನ ಜೆಎಂಎಫ್ ಸಿ 5ನೇ ನ್ಯಾಯಾಲಯವು ವಿಚಾರಣೆ ನಡೆಸಿತು. ಇಂತಹ ಪ್ರಕರಣದಲ್ಲಿ ನಟಿ ಪದ್ಮಜಾ ವಿರುದ್ಧ ಜಾಮೀನು ರಹಿತ ಬಂಧನದ ವಾರಂಟ್ ಜಾರಿ ಮಾಡಿದೆ.

- Advertisement -

Latest News

error: Content is protected !!