Wednesday, June 19, 2024
Homeತಾಜಾ ಸುದ್ದಿಜಮ್ಮು-ಕಾಶ್ಮೀರದಲ್ಲಿ ಸೇನೆಯ ಭರ್ಜರಿ ಕಾರ್ಯಾಚರಣೆ : ಐವರು ಪಾಕ್ ಉಗ್ರರ ಬಂಧನ

ಜಮ್ಮು-ಕಾಶ್ಮೀರದಲ್ಲಿ ಸೇನೆಯ ಭರ್ಜರಿ ಕಾರ್ಯಾಚರಣೆ : ಐವರು ಪಾಕ್ ಉಗ್ರರ ಬಂಧನ

spot_img
- Advertisement -
- Advertisement -

ಸೊಪೋರ್: ಭಾರತೀಯ ಸೇನೆ ಜಮ್ಮು ಮತ್ತು ಕಾಶ್ಮೀರದ ಸೊಪೌರ್’ನಲ್ಲಿ ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ, ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಗೆ ಸೇರಿದ್ದ ಐವರು ಉಗ್ರರನ್ನು ಬಂಧಿಸಿದ್ದಾರೆ.

ತುಜಾರ್ ಗ್ರಾಮದಲ್ಲಿ ನಾಗರೀಕ ಪ್ರದೇಶಗಳ ಮೇಲೆ ನಡೆದಿದ್ದ ಗ್ರೆನೇಡ್ ದಾಳಿಯಲ್ಲಿ ಈ ಐವರೂ ಉಗ್ರರು ಭಾಗಿಯಾಗಿದ್ದಾರೆಂದು ಹೇಳಲಾಗುತ್ತಿದೆ.

ಸೊಪೋರ್ ನಲ್ಲಿ ಉಗ್ರರು ಅಡಗಿರುವ ಕುರಿತು ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಸೇನಾ ಪಡೆ ಹಾಗೂ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಐವರು ಉಗ್ರರನ್ನು ಬಂಧಿಸಿದ್ದಾರೆಂದು ವರದಿಗಳು ತಿಳಿಸಿವೆ.

ಕಾರ್ಯಾಚರಣೆ ವೇಳೆ ಸೇನಾಪಡೆ 5 ಹ್ಯಾಂಡ್ ಮೇಡ್ ಗ್ರೆನೇಡ್ ಹಾಗೂ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದಿದ್ದು, ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

- Advertisement -
spot_img

Latest News

error: Content is protected !!