- Advertisement -
- Advertisement -
ಗುರುವಾಯನಕೆರೆ: ಸರಕಾರ ಲಾಕ್ ಡೌನ್ ನ ಸಂದರ್ಭ ಅಗತ್ಯಗಳಿಗೆ ನೀಡಿದ ವಿನಾಯಿತಿಯನ್ನು ದುರುಪಯೋಗಪಡಿಸಿಕೊಳ್ಳುವ ಕೆಲವರು ಮನಬಂದಂತೆ ತಮ್ಮ ವಾಹನವೇರಿ ಸುತ್ತಾಡುತ್ತಿದ್ದಾರೆ. ಇಂತಹ ವಿವೇಚನಾರಹಿತರಿಗೆ ಬಿಸಿ ಮುಟ್ಟಿಸುವ ಕೆಲಸ ಇಂದು ಬೆಳಿಗ್ಗೆ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮದ್ದಡ್ಕದಲ್ಲಿ ನಡೆಯಿತು.
ಅನಗತ್ಯ ತಿರುಗುವ ವಾಹನಗಳನ್ನು ಮದ್ದಡ್ಕ ಬಳಿ ತಡೆದ ಬೆಳ್ತಂಗಡಿ ಪೊಲೀಸರು, ಸೂಕ್ತ ಎಚ್ಚರಿಕೆ ನೀಡಿ ಬಿಸಿ ಮುಟ್ಟಿಸಿದರು.
ಲಾಕ್ ಡೌನ್ ಘೋಷಿಸಿರುವ ಸರಕಾರ, ಅಗತ್ಯ ಕೆಲಸಗಳಿಗೆ ಮಾತ್ರ ಮಧ್ಯಾಹ್ನ 12 ಗಂಟೆವರೆಗೆ ಸಮೀಪದ ಅಂಗಡಿಗೆ ಹೋಗಿ ಬರಲು ಅವಕಾಶ ಕಲ್ಪಿಸಿದೆ. ಕೃಷಿಕರಿಗೆ ಇದೇ ಸಂದರ್ಭದಲ್ಲಿ ತಾವು ಬೆಳೆದ ಉತ್ಪನ್ನಗಳ ಮಾರಾಟಕ್ಕೂ ಅವಕಾಶ ನೀಡಲಾಗಿದೆ.
- Advertisement -