Monday, May 17, 2021
Homeತಾಜಾ ಸುದ್ದಿಸಂಗೀತ ನಿರ್ದೇಶಕ ಅರ್ಜುನ್ ಜನ್ಯರ ಸಹೋದರ ಕೊರೋನಾಗೆ ಬಲಿ

ಸಂಗೀತ ನಿರ್ದೇಶಕ ಅರ್ಜುನ್ ಜನ್ಯರ ಸಹೋದರ ಕೊರೋನಾಗೆ ಬಲಿ

- Advertisement -
- Advertisement -

ಕಿಲ್ಲರ್ ಕೊರೋನಾ ಸೋಂಕಿಗೆ ತುತ್ತಾಗಿ ಕನ್ನಡ ಚಲನಚಿತ್ರದ ಮ್ಯೂಸಿಕಲ್ ಮಾಂತ್ರಿಕ ಖ್ಯಾತಿಯ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಸಹೋದರ ಮೃತಪಟ್ಟಿದ್ದಾರೆ.

ಅರ್ಜುನ್ ಜನ್ಯ ಅವರ ಸೋದರ 49 ವರ್ಷದ ಕಿರಣ್ ಮೃತಪಟ್ಟಿದ್ದಾರೆ. 15 ದಿನಗಳ ಹಿಂದೆ ಅವರಿಗೆ ಸೋಂಕು ತಗಲಿದ್ದು ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆನ್ನಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಅರ್ಜುನ್ ಜನ್ಯ ಮಾಹಿತಿ ನೀಡಿದ್ದು, ಕೋವಿಡ್ ನಿಂದ ನನ್ನ ಸಹೋದರನನ್ನು ಕಳೆದುಕೊಂಡೆ. ಸಹೋದರನಿಲ್ಲದ ನೋವನ್ನು ಹೇಗೆ ವ್ಯಕ್ತಪಡಿಸಬೇಕೆಂದು ನನಗೆ ತಿಳಿದಿಲ್ಲ. ನಾನು ಉಸಿರಾಡುವವರೆಗೂ ಇರುವೆ ಎಂದು ಹೇಳಿದ್ದಾರೆ.

- Advertisement -
- Advertisment -

Latest News

error: Content is protected !!