Saturday, June 6, 2026
HomeUncategorizedಅಡಿಕೆ ಹಳದಿ ರೋಗದ ಸಮಸ್ಯೆ ಬಗ್ಗೆ ದೆಹಲಿಯಲ್ಲಿ ಚರ್ಚೆ

ಅಡಿಕೆ ಹಳದಿ ರೋಗದ ಸಮಸ್ಯೆ ಬಗ್ಗೆ ದೆಹಲಿಯಲ್ಲಿ ಚರ್ಚೆ

- Advertisement -
- Advertisement -

ನವದೆಹಲಿ: ರಾಜ್ಯದ ಅಡಿಕೆ ಬೆಳಗಾರರ ಸಮಸ್ಯೆ ಕುರಿತು ನವದೆಹಲಿಯಲ್ಲಿ ಇಂದು ಚರ್ಚೆ ನಡೆದಿದೆ. ಕೃಷಿ ಭವನದಲ್ಲಿ ಇಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆಯ ಕರ್ನಾಟಕದ ಅಡಿಕೆ ಬೆಳೆಗಾರರ ಸಂಘದ ಸದಸ್ಯರನ್ನು ಭೇಟಿಯಾಗಿ ಚರ್ಚಿಸಿದರು.

ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸಮ್ಮುಖದಲ್ಲಿ ನಡೆದ ಚರ್ಚೆಯಲ್ಲಿ, ಅಡಿಕೆ ಕೃಷಿಗೆ ಆವರಿಸಿರುವ ಹಳದಿ ರೋಗ ಹಾಗೂ ರಾಜ್ಯದ ಅಡಿಕೆ ಬೆಳೆಗಾರ ಹಿತ ಕಾಯುವ ವಿಚಾರಗಳನ್ನು ಚರ್ಚಿಸಲಾಯಿತು.

ಚರ್ಚೆ ವೇಳೆ ರಾಜ್ಯದ ಅಡಿಕೆ ಬೆಳೆಗಾರರ ಸಮಸ್ಯೆಗಳನ್ನು ಶೋಭಾ ಕರಂದ್ಲಾಜೆ ಕೇಂದ್ರ ಕೃಷಿ ಸಚಿವರಿಗೆ ಮನವರಿಕೆ ಮಾಡಿ ಕೊಟ್ಟಿದ್ದಾರೆ.

ದೇಶದ ಸಮಸ್ತ ರೈತರ ಸಮಗ್ರ ಕಲ್ಯಾಣಕ್ಕಾಗಿ ಅಗತ್ಯ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಳ್ಳುತ್ತಿದ್ದು ರೈತರ ಹಿತವನ್ನು ಕಾಯಲು ಕೇಂದ್ರ ಸರ್ಕಾರ ಬದ್ದವಾಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಚರ್ಚೆ ವೇಳೆ ಭರವಸೆ ನೀಡಿದ್ದಾರೆ.‌

- Advertisement -

Latest News

error: Content is protected !!