Saturday, June 6, 2026
HomeUncategorizedಕಾಣಿಯೂರಿನಲ್ಲಿ ಅಡಿಕೆ, ಸಿಲಿಂಡರ್ ಕಳವು: ಪತ್ತೆಯಾಗದ ಕಳ್ಳರು

ಕಾಣಿಯೂರಿನಲ್ಲಿ ಅಡಿಕೆ, ಸಿಲಿಂಡರ್ ಕಳವು: ಪತ್ತೆಯಾಗದ ಕಳ್ಳರು

- Advertisement -
- Advertisement -

ಪುತ್ತೂರು: ಇಲ್ಲಿನ ಕಾಣಿಯೂರು ಗ್ರಾಮದ ಅಡಿಕೆ ಅಂಗಡಿಯೊಂದರಲ್ಲಿ ಅಡಿಕೆ ಕಳ್ಳತನವಾದ ಘಟನೆ ಮಾ 23ರಂದು ರಾತ್ರಿ ನಡೆದಿದೆ.


ಅಂಗಡಿಯ ಶಟರ್ ಒಡೆದು ಈ ಕೃತ್ಯ ನಡೆಸಲಾಗಿದ್ದು, ಈ ಬಗ್ಗೆ ಶ್ರೀಗುರು ಟ್ರೇಡ್ ಮಾಲಕ ಪವನ್ ಇವರು ಪೋಲಿಸರಿಗೆ ನೀಡಿರುವ ದೂರಿನಲ್ಲಿ ಸುಮಾರು 2 ಕ್ವಿಂಟಲ್ ಅಡಿಕೆ ಕಳ್ಳತನವಾಗಿದೆ ಎಂದು ತಿಳಿಸಿದ್ದಾರೆ.
ಅಲ್ಲದೇ ಪಕ್ಕದ ಪೂರ್ವೋದಯ ಸರ್ವೀಸ್ ಸ್ಟೇಷನ್‌ನಲ್ಲಿದ್ದ ಆಕ್ಸಿಜನ್ ಸಿಲಿಂಡರ್ ಕಳ್ಳತನವಾಗಿದೆ. ಘಟನಾ ಸ್ಥಳಕ್ಕೆ ಬೆಳ್ಳಾರೆ ಪೋಲಿಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.


ಕಾಣಿಯೂರು ಪೇಟೆಯಲ್ಲಿ ಹಲವು ವರ್ಷದಿಂದ ನಿರಂತರವಾಗಿ ಸರಣಿ ಕಳ್ಳತನ ನಡೆಯುತ್ತಿದೆ. ಅಡಿಕೆ ಅಂಗಡಿ, ಜನರಲ್ ಸ್ಟೋರ್ ಹೀಗೆ ಲಕ್ಷಾಂತರ ರೂಪಾಯಿಯ ಅಡಿಕೆ, ಹಣ ಕಳ್ಳತನ ನಡೆದಿದೆ. ಅಲ್ಲದೇ ಕೆಲದಿನಗಳ ಹಿಂದೆ ಹಾಡು ಹಗಲೇ ಡ್ರೈವರ್‌ನಿಂದ ಹಣ ಕಳ್ಳತನವಾದ ಘಟನೆಯೂ ನಡೆದಿದ್ದರೂ ಈವರೆಗೆ ಕಳ್ಳರ ಪತ್ತೆಯಾಗಿಲ್ಲ.

- Advertisement -

Latest News

error: Content is protected !!