Friday, May 3, 2024
Homeಕರಾವಳಿಅರಂತೋಡು: ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರ್ತಕರ ಸಭೆ

ಅರಂತೋಡು: ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರ್ತಕರ ಸಭೆ

spot_img
- Advertisement -
- Advertisement -

ಅರಂತೋಡು: ಸುಳ್ಯ ತಾಲೂಕಿನ ಅರಂತೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಂತೋಡು ಮತ್ತು ತೊಡಿಕಾನ ಗ್ರಾಮಗಳ ವರ್ತಕರ ಸಭೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲೀಲಾವತಿ ಕೊಡೆಂಕಿರಿ ನೇತೃತ್ವದಲ್ಲಿ ನಡೆಸಲಾಯಿತು.

ಕರೋನಾ ವೈರಸ್ ತಡೆಯುವಲ್ಲಿ ವರ್ತಕರ ಪಾತ್ರದ ಕುರಿತು ಚರ್ಚಿಸಲಾಯಿತು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲ ವರ್ತಕರು ಒಮ್ಮತ ಅಭಿಪ್ರಾಯದಿಂದ ಈ ಕೆಳಗಿನಂತೆ ನಿರ್ಣಯಿಸಲಾಯಿತು .

  • ದಿನಾಂಕ 31-05-2020 ರವರೆಗೆ ತಮ್ಮ ಅಂಗಡಿಗಳ ವ್ಯಾಪಾರವನ್ನು ಬೆಳಿಗ್ಗೆ ಏಳು ಗಂಟೆಯಿಂದ ಅಪರಾಹ್ನ ಎರಡು ಗಂಟೆಯವರೆಗೆ ಮಾತ್ರ ನಡೆಸಲು ಸರ್ವಾನುಮತದಿಂದ ನಿರ್ಣಯಿಸಲಾಯಿತು.
  • ಮಾಸ್ಕ್ ಧರಿಸದೇ ಬಂದವರ ಜೊತೆ ಯಾವುದೇ ರೀತಿಯ ವ್ಯವಹಾರ ನಡೆಸುವುದನ್ನು ನಿಷೇಧಿಸಲಾಯಿತು.
  • ಅಪರಿಚಿತರು ಅಥವಾ ಪ್ರವಾಸಿಗರು ಖರೀದಿಗೆ ಬಂದಂತ ಸಂದರ್ಭದಲ್ಲಿ ಅವರ ವಿವರವನ್ನು ಗ್ರಾಮ ಪಂಚಾಯಿತಿಗೆ ನೀಡಲು ನಿರ್ಣಯಿಸಲಾಯಿತು.
  • ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಗ್ರಾಹಕರಿಗೆ ಅರಿವು ಮೂಡಿಸುವ ಜವಾಬ್ದಾರಿಯನ್ನು ವರ್ತಕರೇ ನಡೆಸಲು ನಿರ್ಣಯಿಸಲಾಯಿತು .
  • ಗ್ರಾಮ ಪಂಚಾಯಿತಿಯ ಸ್ವಚ್ಛತಾ ತಂಡದವರ ಸಹಕರಿಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯತೆಯನ್ನು ಕಾಪಾಡಿಕೊಳ್ಳಲು ಸಹಕರಿಸಲು ಸರ್ವ ವರ್ತಕರು ಒಪ್ಪಿಗೆ ಸೂಚಿಸಿದರು

- Advertisement -
spot_img

Latest News

error: Content is protected !!