Sunday, June 7, 2026
Homeಕರಾವಳಿಮಂಗಳೂರು: ಪಾವಂಜೆ ದೇವಸ್ಥಾನದ ಅಂಗಣದಲ್ಲಿ ಟಿಕ್ ಟಾಕ್ ವಿಡಿಯೋ, ವಿವಾದದ ಬಳಿಕ ಯುವಕ ಯುವತಿಯರಿಂದ ಕ್ಷಮೆಯಾಚನೆ!

ಮಂಗಳೂರು: ಪಾವಂಜೆ ದೇವಸ್ಥಾನದ ಅಂಗಣದಲ್ಲಿ ಟಿಕ್ ಟಾಕ್ ವಿಡಿಯೋ, ವಿವಾದದ ಬಳಿಕ ಯುವಕ ಯುವತಿಯರಿಂದ ಕ್ಷಮೆಯಾಚನೆ!

- Advertisement -
- Advertisement -

ಮಂಗಳೂರು: ಯುವಕ-ಯುವತಿಯರು ಪಾವಂಜೆ ದೇವಳದಲ್ಲಿ ಮಾಡಿರುವ ಟಿಕ್ ಟಾಕ್ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಇದೀಗ ವಿಡಿಯೋ ಮಾಡಿರುವ ತಪ್ಪಿಗಾಗಿ ಯುವಕ ಯುವತಿಯರು ಕ್ಷಮೆ ಕೇಳಿದ್ದಾರೆ.

ಮುಲ್ಕಿ ನಿವಾಸಿ ಪ್ರತೀಕ್ ಶೆಟ್ಟಿ ಎಂಬಾತ ಮೂವರು ಯುವತಿಯರೊಂದಿಗೆ ಹಳೆಯಂಗಡಿ ಸಮೀಪದ ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಅಸಭ್ಯವಾಗಿ ಟಿಕ್​ಟಾಕ್​ ಮಾಡಿರುವುದಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾನೆ. ಇದರಿಂದ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ಬಂದಿದೆ ಎಂದು ಭಕ್ತರು ಹಾಗೂ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದು, ದೇವಸ್ಥಾನದ ಆಡಳಿತ ಮಂಡಳಿ ಮುಲ್ಕಿ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು.

ಇದೀಗ ತಮ್ಮ ತಪ್ಪಿನ ಅರಿವಾಗಿರುವ ಯುವಕ ಹಾಗೂ ಯುವತಿಯರು ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೇಳಿದ್ದಾರೆ.

- Advertisement -

Latest News

error: Content is protected !!