Thursday, June 4, 2026
Homeಕರಾವಳಿಅಪಹರಣಕ್ಕೆ ಒಳಗಾದ ಬಾಲಕ ಅನುಭವ್ ಅಮ್ಮನ ಮಡಿಲು ಸೇರಿದ ಕ್ಷಣ ಹೇಗಿತ್ತು ನೋಡಿ...

ಅಪಹರಣಕ್ಕೆ ಒಳಗಾದ ಬಾಲಕ ಅನುಭವ್ ಅಮ್ಮನ ಮಡಿಲು ಸೇರಿದ ಕ್ಷಣ ಹೇಗಿತ್ತು ನೋಡಿ…

- Advertisement -
- Advertisement -

ಬೆಳ್ತಂಗಡಿ: ಪಾಪಿಗಳ ಹಣದಾಸೆಗಾಗಿ ಕಿಡ್ನ್ಯಾಪ್ ಆಗಿದ್ದ 8 ವರ್ಷದ ಪೋರ ಅನುಭವ್ ಕೊನೆಗೂ ಅಮ್ಮನ ಮಡಿಲು ಸೇರಿದ್ದಾನೆ. ಮಗು ನಾಪತ್ತೆಯಾಗಿದ್ದಾಗಿನಿಂದ ಊಟ, ನಿದ್ದೆ ಬಿಟ್ಟು ಒದ್ದಾಡುತ್ತಿದ್ದ ಅನುಭವ್ ಕುಟುಂಬ ಇದೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಅದರಲ್ಲೂ ಮಗು ಅವಹರಣವಾದಾಗಿನಿಂದ ಹೆತ್ತಮ್ಮ ಪಟ್ಟ ಯಾತನೆ ಆಕೆಗಷ್ಟೇ ಗೊತ್ತು.

ಇದೀಗ ಮಗು ಸುರಕ್ಷಿತವಾಗಿ ಅಮ್ಮನ ಮಡಿಲು ಸೇರಿದೆ. ಇನ್ನು ಬಾಲಕನನ್ನು ಮೊದಲ ಬಾರಿ ನೋಡುತ್ತಿದ್ದಂತೆ ತಾಯಿ ತೀರಾ ಭಾವುಕರಾಗಿದ್ದರು. ತನ್ನ ಕಂದನನ್ನು ಎತ್ತಿ ಮುದ್ದಾಡಿ ಆನಂದಭಾಷ್ಪ ಸುರಿಸಿದ್ರು. ಈ ದೃಶ್ಯ ಎಂತಹವರ ಕಣ್ಣಾಲಿಗಳನ್ನಾದರೂ ತೇವಗೊಳಿಸದೇ ಇರಲಾರದು. ಒಟ್ಟಿನಲ್ಲಿ ಅನುಭವ್ ಸುರಕ್ಷಿತವಾಗಿ ವಾಪಸ್ ಬಂದಿರೋದು ಎಲ್ಲರನ್ನೂ ನಿಟ್ಟುಸಿರು ಬಿಡುವಂತೆ ಮಾಡಿದೆ.

- Advertisement -

Latest News

error: Content is protected !!