Saturday, May 18, 2024
Homeತಾಜಾ ಸುದ್ದಿಎರಡೇ ತಿಂಗಳಲ್ಲಿ ತಾಯಿಯಾಗಿದ್ದು ಹೇಗೆ ಅನ್ನೋ ಸತ್ಯ ಬಿಚ್ಚಿಟ್ಟ ಗಾಯಕಿ ನೇಹಾ ಕಕ್ಕರ್...

ಎರಡೇ ತಿಂಗಳಲ್ಲಿ ತಾಯಿಯಾಗಿದ್ದು ಹೇಗೆ ಅನ್ನೋ ಸತ್ಯ ಬಿಚ್ಚಿಟ್ಟ ಗಾಯಕಿ ನೇಹಾ ಕಕ್ಕರ್…

spot_img
- Advertisement -
- Advertisement -

ಮುಂಬೈ: ಎರಡು ತಿಂಗಳ ಹಿಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಗಾಯಕಿ ನೇಹಾ ಕಕ್ಕರ್ ತಾಯಿಯಾಗುತ್ತಿದ್ದಾರೆ ಅನ್ನೋ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ನಿನ್ನೆಯಿಂದ ಹರಿದಾಡುತ್ತಿದೆ. ಅಲ್ಲದೇ ಎರಡೇ ತಿಂಗಳಲ್ಲಿ ಅವರು ಹೇಗೆ ತಾಯಿಯಾದ್ರು ಅನ್ನೋ ಬಗ್ಗೆ ಹತ್ತಾರು ಪ್ರಶ್ನೆಗಳು ಹರಿದಾಡುತ್ತಿದ್ದವು. ಇದೀಗ ಆ ಪ್ರಶ್ನೆಗೆ ನೇಹಾ ಕಕ್ಕರ್ ಅವರೇ ಉತ್ತರ ಕೊಟ್ಟಿದ್ದಾರೆ.

ಅಂದ್ಹಾಗೆ ನೇಹಾ ತಾಯಿಯಾಗುತ್ತಿಲ್ಲವಂತೆ. ಅವರ ಹೊಸ ಆಲ್ಬಂ ಸಾಂಗ್​ಗಾಗಿ ಅವರು ಈ ಅವತಾರ ತೊಟ್ಟಿದ್ದಾರೆ ಅಷ್ಟೇ. ನೇಹಾ ಅವರ ಹೊಸ ಆಲ್ಬಂ ಸಾಂಗ್​ ‘ಕಯಾಲ್​ ರಕ್ಯಾ ಕರ್​’ ಡಿಸೆಂಬರ್​ 22ರಂದು ಬಿಡುಗಡೆಯಾಗಲಿದೆ. ಅದರಲ್ಲಿ ನೇಹಾ ಜತೆ ಆಕೆಯ ಪತಿ ರೋಹನ್​ ಪ್ರೀತ್ ಸಿಂಗ್​ ಕೂಡ ಕಾಣಿಸಿಕೊಂಡಿದ್ದಾರೆ. ಆ ಹಾಡಿನಲ್ಲಿ ಗಾಯಕಿ ಗರ್ಭವತಿ ಆಗಿರುವ ಸಾಧ್ಯತೆಯಿದೆ. ಅದೇ ಕಾರಣಕ್ಕೆ ಈ ರೀತಿಯದ್ದೊಂದು ಫೋಟೋ ತೆಗೆಸಿಕೊಂಡಿದ್ದಾರೆ. ಗುರುವಾರ ಶೇರ್​ ಮಾಡಿದ್ದ ಫೋಟೋವೇ ಆಲ್ಬಂ ಸಾಂಗ್​ನ ಪೋಸ್ಟರ್​ನಲ್ಲೂ ಇದೆ. ಹಾಗಾಗಿ ಇದು ಪೋಸ್ಟರ್​ಗಾಗಿಯೇ ತೆಗೆದ ಚಿತ್ರ ಎಂದು ಸ್ಪಷ್ಟವಾಗಿದೆ.

ಒಟ್ಟಿನಲ್ಲಿ ನೇಹಾ ಪ್ರೆಗ್ನಿನ್ಸಿ ಬಗ್ಗೆ ಹರಿದಾಡುತ್ತಿದ್ದ ಹತ್ತಾರು ಅನುಮಾನ ಹಾಗೇ ಟ್ರೋಲ್ ಗಳಿಗೆ ಸ್ವತಃ ಅವರೇ ಬ್ರೇಕ್ ಹಾಕಿದ್ದಾರೆ.

- Advertisement -
spot_img

Latest News

error: Content is protected !!