Wednesday, June 24, 2026
Homeಚಿಕ್ಕಮಗಳೂರುಚಿಕ್ಕಮಗಳೂರು: ಮತ್ತೊಂದು ವಿವಾದದ ಸುಳಿಯಲ್ಲಿ ದತ್ತಪೀಠ: ನಮಾಜ್ ಮಾಡುತ್ತಿರುವ ವಿಡಿಯೋ ವೈರಲ್

ಚಿಕ್ಕಮಗಳೂರು: ಮತ್ತೊಂದು ವಿವಾದದ ಸುಳಿಯಲ್ಲಿ ದತ್ತಪೀಠ: ನಮಾಜ್ ಮಾಡುತ್ತಿರುವ ವಿಡಿಯೋ ವೈರಲ್

- Advertisement -
- Advertisement -

ಚಿಕ್ಕಮಗಳೂರು: ಇತ್ತೀಚೆಗಷ್ಟೇ ಮಾಂಸದೂಟ ವಿಚಾರಕ್ಕೆ ಸುದ್ದಿಯಾಗಿದ್ದ ದತ್ತಪೀಠ ಇದೀಗ ಮತ್ತೊಂದು ವಿವಾದದ ಸುಳಿಗೆ ಸಿಲುಕಿದೆ. ಕೋರ್ಟ್ ಆದೇಶ ಮೀರಿ ದತ್ತ ಪೀಠದ ಆವರಣದಲ್ಲಿ ನಮಾಜ್ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ದತ್ತಪೀಠದ ಆವರಣ ಮಾತ್ರವಲ್ಲದೆ ಗುಹೆಯ ಒಳಗೂ ನಮಾಜ್‌ ಮಾಡುತ್ತಿದ್ದಾರೆದು ಆರೋಪಿಸಲಾಗಿದೆ. ಆವರಣದಲ್ಲಿ ನಮಾಜ್ ಮಾಡುವ ವಿಡಿಯೋವೊಂದು ಇದೀಗ ವೈರಲ್ ಆಗಿದೆ.

ಕೋರ್ಟ್ ಆದೇಶದನ್ವಯ ಆವರಣ ಸೇರಿ ಗುಹೆ ಒಳಗೆ ಪ್ರಾರ್ಥನೆ, ನಮಾಜ್, ಪೂಜೆ ಸಲ್ಲಿಸಲು ಅವಕಾಶವಿಲ್ಲ. ದತ್ತಭಕ್ತರು ಸೇರಿದಂತೆ ಯಾರಿಗೂ ಯಾವುದೇ ಪೂಜೆಗೆ ಅವಕಾಶವಿಲ್ಲ. ಜಿಲ್ಲಾಡಳಿತದಿಂದ ನೇಮಿಸಲ್ಪಟ್ಟ ಮುಜಾವರ್ ರಿಂದ ಮಾತ್ರ ದತ್ತ ಪಾದುಕೆ, ಗೋರಿಗಳಿಗೆ ಪೂಜೆಗೆ ಅವಕಾಶವಿದೆ. ಆದರೆ ನ್ಯಾಯಾಲಯದ ಆದೇಶವನ್ನು ಗಾಳಿಗೆ ತೂರಿ ಪೂಜೆ ಮಾಡಲಾಗುತ್ತಿದೆ. ಮುಜರಾಯಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎನ್ನಲಾಗಿದೆ.

ದತ್ತ ಪೀಠದ ಆವರಣದಲ್ಲಿ ನಮಾಜ್ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

- Advertisement -

Latest News

error: Content is protected !!