Sunday, May 19, 2024
Homeತಾಜಾ ಸುದ್ದಿಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಸರಕಾರದಿಂದ ಬಿಗ್ ಶಾಕ್ : ಮತ್ತೆ 2 ಕೆಜಿ ಅಕ್ಕಿ...

ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಸರಕಾರದಿಂದ ಬಿಗ್ ಶಾಕ್ : ಮತ್ತೆ 2 ಕೆಜಿ ಅಕ್ಕಿ ಕಡಿತ?

spot_img
- Advertisement -
- Advertisement -

ಬೆಂಗಳೂರು: ಆರ್ಥಿಕ ಹೊರೆ ತಗ್ಗಿಸಲು ಮೂರು ತಿಂಗಳ ಹಿಂದಷ್ಟೇ ಅನ್ನಭಾಗ್ಯ ಯೋಜನೆ ಅಕ್ಕಿ ಕಡಿತಗೊಳಿಸಿದ್ದ ರಾಜ್ಯ ಸರ್ಕಾರ, ಇದೀಗ ಮತ್ತೆ 2 ಕೆ.ಜಿ. ಕಡಿತಕ್ಕೆ ಮುಂದಾಗಿದೆ. ಪ್ರತಿ ತಿಂಗಳು ಬಿಪಿಎಲ್ ಕಾರ್ಡ್​ದಾರರಿಗೆ ವಿತರಿಸುವ 5 ಕೆ.ಜಿ. ಅಕ್ಕಿ ಪ್ರಮಾಣವನ್ನು 3 ಕೆ.ಜಿ.ಗೆ ಇಳಿಸಿ, ಬದಲಿಗೆ ತಲಾ 2 ಕೆ.ಜಿ. ರಾಗಿ ಅಥವಾ ಜೋಳ ನೀಡಲು ಆಹಾರ ಇಲಾಖೆ ನಿರ್ಧರಿಸಿದೆ. ಆಯಾ ಜಿಲ್ಲೆಯ ಜಂಟಿ ನಿರ್ದೇಶಕರಿಗೆ ಈಗಾಗಲೇ ಮೌಖಿಕ ಸೂಚನೆ ನೀಡಿರುವ ಇಲಾಖೆ, ಜು.1ರಿಂದ ಫಲಾನಭವಿಗಳಿಗೆ ಹೊಸ ನಿಯಮದಡಿ ಪಡಿತರ ವಿತರಿಸಲು ಪೂರ್ವಸಿದ್ಧತೆ ಮಾಡಿಕೊಳ್ಳಿ ಎಂದಿದೆ.
ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡುದಾರರಿಗೆ 5 ಕೆಜಿ ಅಕ್ಕಿ ವಿತರಿಸಲಾಗುತ್ತಿದೆ. ಈಗ 3 ಕೆಜಿ ಅಕ್ಕಿ ನೀಡಿ ಜೊತೆಗೆ 2 ಕೆಜಿ ರಾಗಿ ಇಲ್ಲವೇ ಜೋಳ ವಿತರಣೆ ಮಾಡಲು ನಿರ್ಧರಿಸಿದ್ದು, ಆಯಾ ಪ್ರದೇಶಕ್ಕೆ ಅನುಗುಣವಾಗಿ ತಲಾ ಕೆಜಿ ಗೋಧಿ, ರಾಗಿ ಅಥವಾ ಜೋಳ ನೀಡಲಾಗುವುದು.
ಜುಲೈ 1 ರಿಂದ ದಕ್ಷಿಣ ಕರ್ನಾಟಕದಲ್ಲಿ ರಾಗಿ ನೀಡಲಿದ್ದು, ಉತ್ತರ ಕರ್ನಾಟಕದಲ್ಲಿ ಜೋಳ ವಿತರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ 7 ಕೆಜಿ ಅಕ್ಕಿ ನೀಡುತ್ತಿದ್ದು, ಅದನ್ನು 5 ಕೆಜಿಗೆ ಇಳಿಕೆ ಮಾಡಲಾಗಿತ್ತು. ಇದೀಗ ಮತ್ತೆ 2 ಕೆಜಿ ಕಡಿಮೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!