Wednesday, June 3, 2026
Homeಕರಾವಳಿಸುಳ್ಯ: ರಮಾನಾಥ ರೈ ಹುಟ್ಟುಹಬ್ಬದ ಆಚರಣೆ ವೇಳೆ ಕಳ್ಳರ ಕೈಚಳಕ: ಬೆಳ್ಳಾರೆ ಸಿಎ ಬ್ಯಾಂಕ್ ಅಧ್ಯಕ್ಷ...

ಸುಳ್ಯ: ರಮಾನಾಥ ರೈ ಹುಟ್ಟುಹಬ್ಬದ ಆಚರಣೆ ವೇಳೆ ಕಳ್ಳರ ಕೈಚಳಕ: ಬೆಳ್ಳಾರೆ ಸಿಎ ಬ್ಯಾಂಕ್ ಅಧ್ಯಕ್ಷ ಅನಿಲ್ ರೈ ಚಾವಡಿಬಾಗಿಲು ಕಿಸೆಯಿಂದ 50 ಸಾವಿರ ಎಗರಿಸಿದ ಖದೀಮರು

- Advertisement -
- Advertisement -

ಸುಳ್ಯ: ಮಾಜಿ ಸಚಿವ ರಮಾನಾಥ ರೈಯವರ ಹುಟ್ಟು ಹಬ್ಬದ ಪ್ರಯುಕ್ತ  ಪೆರ್ನೆಯಲ್ಲಿ ನಡೆದ ರಕ್ತದಾನ ಶಿಬಿರ,  ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಬೆಳ್ಳಾರೆ ಸಿಎ ಬ್ಯಾಂಕ್  ಅನಿಲ್ ರೈ ಚಾವಡಿಬಾಗಿಲು ಅಧ್ಯಕ್ಷರ ಕಿಸೆಯಲ್ಲಿದ್ದ 50 ಸಾವಿರ ರೂ ಗಳ ಕಟ್ಟನ್ನು ಕಿಸೆಗಳ್ಳರು ಎಗರಿಸಿದ್ದಾರೆ.

ಸಿಎ ಬ್ಯಾಂಕ್ ಅಧ್ಯಕ್ಷ ಅನಿಲ್ ರೈ ಚಾವಡಿಬಾಗಿಲು ಅವರು ತಾನು ಅಡಿಕೆ ಮಾರಾಟ ಮಾಡಿದ  50 ಸಾವಿರ ರೂ.ಗಳನ್ನು ಪ್ಯಾಂಟಿನ ಎಡಬದಿಯ ಕಿಸೆಯೊಳಗೆ ಇಟ್ಟುಕೊಂಡಿದ್ದರು. ರಮಾನಾಥ ರೈಯವರಿಗೆ ಮಾಲಾರ್ಪಣೆ ವೇಳೆ ಒಮ್ಮೆಲೆ ರಶ್ ಉಂಟಾಗಿತ್ತು. ಈ ವೇಳೆ ನನ್ನ ಕಿಸೆಯಲ್ಲಿದ್ದ 50 ಸಾವಿರ ರೂ.ಗಳ ಕಟ್ಟು ನಾಪತ್ತೆಯಾಗಿದೆ ಎನ್ನಲಾಗಿದೆ.

ಘಟನೆ ಬಳಿಕ ಸಮಾರಂಭ ನಡೆದ ಸಭಾಂಗಣದಲ್ಲಿ ಸಿಸಿ ಕ್ಯಾಮರಾ ಚೆಕ್ ಮಾಡೋಣ ಎಂದು ಹೋದೆವು . ಆದರೆ ಅಲ್ಲಿ ಸಿಸಿ ಕ್ಯಾಮರಾ ಇರಲಿಲ್ಲ ಎಂದು ಅನಿಲ್ ರೈ ಹೇಳಿದ್ದಾರೆ.

- Advertisement -

Latest News

error: Content is protected !!