Monday, June 30, 2025
Homeತಾಜಾ ಸುದ್ದಿಬಾಳೆಎಲೆಯನ್ನೇ ಉಡುಪು ಮಾಡಿಕೊಂಡ ದಕ್ಷಿಣ ಭಾರತದ ಖ್ಯಾತ ಯುವನಟಿ !

ಬಾಳೆಎಲೆಯನ್ನೇ ಉಡುಪು ಮಾಡಿಕೊಂಡ ದಕ್ಷಿಣ ಭಾರತದ ಖ್ಯಾತ ಯುವನಟಿ !

spot_img
- Advertisement -
- Advertisement -

ತಿರುವನಂತಪುರಂ: ಕೊರೊನಾ ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲೇ ಕಾಲ ಕಳೆಯುತ್ತಿರುವ ನಟ-ನಟಿಯರು ವಿಚಿತ್ರ ಕಾಸ್ಟ್ಯೂಮ್ ಧರಿಸಿ ಫೋಟೋಗಳಿಗೆ ಫೋಸ್ ನೀಡಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇದೀಗ ದಕ್ಷಿಣ ಭಾರತದ ಖ್ಯಾತ ಯುವನಟಿಯೊಬ್ಬರು ಬಾಳೆ ಎಲೆಯನ್ನು ಧರಿಸಿ ವಿಭಿನ್ನವಾಗಿ ಫೋಟೋ ಶೂಟ್ ಮಾಡಿಸಿದ್ದು, ಈ ಫೋಟೋ ಇದೀಗ ಭಾರೀ ವೈರಲ್ ಆಗಿದೆ.

ಮಲಯಾಳಂ ಮತ್ತು ತಮಿಳು ಚಿತ್ರರಂಗದಲ್ಲಿ ತನ್ನ ನಟನೆಯ ಮೂಲಕ ಮನೆ ಮಾತಾಗಿರುವ ನಟಿ ಅನಿಕಾ ಸುರೇಂದ್ರನ್ ಬಾಳೆ ಎಲೆಯನ್ನು ವಸ್ತ್ರವನ್ನಾಗಿ ಧರಿಸಿ, ಬಾಳೆ ಹೂವಿನಲ್ಲಿ ಕೇಶಾಲಂಕಾರ ಮಾಡಿ ಫೋಟೋಗೆ ಫೋಸ್ ನೀಡಿದ್ದು, ಇವರ ಫೋಟೋಶೂಟ್​​ ನೆಟ್ಟಿಗರ ಗಮನ ಸೆಳೆದಿದೆ. ಅನಿಕಾ ಅವರ ವಿಭಿನ್ನ ಲುಕ್​ ನೋಡಿ ಅಭಿಮಾನಿಗಳು ಫಿಧಾ ಆಗಿದ್ದಾರೆ.

16 ವರ್ಷದ ಅನಿಕಾ 2007ರಲ್ಲಿ ‘ಚೊಟ್ಟಾ ಮುಂಬೈ’ ಎಂಬ ಮಲಯಾಳಂ ಸಿನಿಮಾದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಕಳೆದ ವರ್ಷ ಬಿಡುಗಡೆಗೊಂಡ ವಿಶ್ವಾಸಂ ಸಿನಿಮಾದಲ್ಲಿ ನಟ ಅಜಿತ್ ಕುಮಾರ್ ಮತ್ತು ನಯನ ತಾರಾ ಅವರ ಮಗಳಾಗಿ ಅಭಿನಯಿಸಿದ್ದರು. 17ಕ್ಕೂ ಹೆಚ್ಚಿನ ಸಿನಿಮಾದಲ್ಲಿ ನಟಿಸಿರುವ ಅನಿಕಾ, ಬಾಲನಟಿಯಾಗಿ ಹೆಚ್ಚು ಕಾಣಿಸಿಕೊಂಡಿದ್ದರು. ಇವರ ನಟನೆಗೆ ಕೇರಳ ರಾಜ್ಯ ಉತ್ತಮ ಬಾಲ ನಟಿ ಪ್ರಶಸ್ತಿಯನ್ನು ನೀಡಿದೆ. ಏಷ್ಯಾನ್​ ಫಿಲಂ ಅವಾರ್ಡ್​ ಕೂಡ ಲಭಿಸಿದೆ.

- Advertisement -
spot_img

Latest News

error: Content is protected !!