Friday, July 19, 2024
Homeಕರಾವಳಿಆಂಧ್ರ ಮೂಲದ ಅಪರಿಚಿತ ವ್ಯಕ್ತಿ ಸುಳ್ಯದ ನೆಲ್ಲೂರು ‌ಕೆಮ್ರಾಜೆಯಲ್ಲಿ ಪ್ರತ್ಯಕ್ಷ !

ಆಂಧ್ರ ಮೂಲದ ಅಪರಿಚಿತ ವ್ಯಕ್ತಿ ಸುಳ್ಯದ ನೆಲ್ಲೂರು ‌ಕೆಮ್ರಾಜೆಯಲ್ಲಿ ಪ್ರತ್ಯಕ್ಷ !

spot_img
- Advertisement -
- Advertisement -

ನೆಲ್ಲೂರು ‌ಕೆಮ್ರಾಜೆ: ಅಪರಿಚಿತ ವ್ಯಕ್ತಿಯೊಬ್ಬರು ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದ ಕೊರತ್ತೋಡಿ ಬಸ್ ಸ್ಟ್ಯಾಂಡ್ ‌ನಲ್ಲಿರುವುದನ್ನು‌ ಗಮನಿಸಿದ ಸ್ಥಳೀಯರು ಪಂಚಾಯತ್ ಕೊರೋನಾ ಕಾರ್ಯಪಡೆಗೆ ಮತ್ತು ಸುಳ್ಯ‌ ತಹಶೀಲ್ದಾರ್ ಗೆ ವಿಷಯ ಮುಟ್ಟಿಸಿ ಬಳಿಕ‌ ನೆಲ್ಲೂರು ಕೆಮ್ರಾಜೆ ಕಾರ್ಯಪಡೆಯ ಮೂಲಕ ಆ ವ್ಯಕ್ತಿಯನ್ನು ಸುಳ್ಯ ಸರಕಾರಿ‌ ಆಸ್ಪತ್ರೆಗೆ‌ ಕೊಂಡೊಯ್ದ ಘಟನೆ ಇಂದು ನಡೆದಿದೆ.

ಆಂಧ್ರ ಮೂಲದವರೆಂದು ಆ ವ್ಯಕ್ತಿ ಹೇಳಿದ್ದು, ರವಿ ಎಂದು ತನ್ನ ಹೆಸರು ಹೇಳಿಕೊಂಡಿದ್ದಾನೆ. ಬಸ್ ಸ್ಟ್ಯಾಂಡ್ ನಲ್ಲಿ ಈ ವ್ಯಕ್ತಿ‌ ಇರುವುದನ್ನು‌ಕಂಡ ಪತ್ರಕರ್ತ ದಯಾನಂದರವರು ತಾಲೂಕು ಆಡಳಿತದ ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ಪಂಚಾಯತ್ ಕಾರ್ಯಪಡೆಯ ಅಧ್ಯಕ್ಷ ದಿವಾಕರ ನಾಯಕ್ ಎರ್ಮೆಟ್ಟಿ, ಕಾರ್ಯಪಡೆಯ ಸದಸ್ಯರುಗಳು‌ ಉಪಸ್ಥಿತರಿದ್ದರು.

ಈತ ಹೇಗೆ ಇಲ್ಲಿಗೆ ಬಂದ ಎಂಬ ವಿಚಾರ ತನಿಖೆಯಿಂದ ತಿಳಿಯಬೇಕಿದೆ.

- Advertisement -
spot_img

Latest News

error: Content is protected !!