- Advertisement -
- Advertisement -
ಅಮರಾವತಿ: ಅಪರಿಚಿತ ವ್ಯಕ್ತಿಯೊಬ್ಬರಿಂದ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರಿಗೆ ಜೀವ ಬೆದರಿಕೆ ಕರೆ ಬಂದಿದ್ದು, ಈ ಸಂಬಂಧ ತನಿಖೆ ನಡೆಯುತ್ತಿದೆ.
ಪವನ್ ಕಲ್ಯಾಣ್ ಅವರ ಕಚೇರಿಗೆ ಅಪರಿಚಿತ ವ್ಯಕ್ತಿ ದೂರವಾಣಿ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ ಜೊತೆಗೆ ಆಕ್ಷೇಪಾರ್ಹವಾದ ಪದಗಳನ್ನು ಬಳಕೆ ಮಾಡಿದ್ದಾನೆ ಎನ್ನಲಾಗಿದೆ.
ಈ ವಿಚಾರವನ್ನು ಕಚೇರಿಯ ಸಿಬ್ಬಂದಿ ತಕ್ಷಣ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಈ ಕುರಿತಂತೆ ಉನ್ನತ ಪೊಲೀಸ್ ಅಧಿಕಾರಿಗಳು ತಕ್ಷಣ ಪ್ರತಿಕ್ರಿಯಿಸಿ, ‘ಈ ಬೆದರಿಕೆ ಕರೆಗಳು ಮತ್ತು ಸಂದೇಶಗಳು ಪವನ್ ಕಲ್ಯಾಣ್ ಸಿಬ್ಬಂದಿಗೆ ಎಲ್ಲಿಂದ ಬಂದವು ಎಂದು ವಿಚಾರಣೆ ನಡೆಸಲಾಗುತ್ತಿದೆ. ಪವನ್ ಹೊರತಾಗಿ ಬೇರೆ ಯಾವುದೇ ಸಚಿವರಿಗೆ ಇಂತಹ ಕರೆಗಳು ಬಂದಿವೆಯೇ,’ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಇದೀಗ ಪವನ್ ಕಲ್ಯಾಣ್ ಗೆ ಬಂದಂತಹ ಬೆದರಿಕೆ ಕರೆ ಹಾಗೂ ಸಂದೇಶಗಳು ಭಾರೀ ಚರ್ಚೆಯಾಗುತ್ತಿದೆ.
- Advertisement -