ಪುತ್ತೂರು ; ಅಂತರ್ ರಾಜ್ಯ ದರೋಡೆ ಪ್ರಕರಣಗಳ ಕುಖ್ಯಾತ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳ, ತ್ರಿಶೋರ್ ಜಿಲ್ಲೆಯ ನಿವಾಸಿ ಇಲಿಯಾಸ್ ಪಿ.ಎ ಬಂಧಿತ ಆರೋಪಿ.
ಆರೋಪಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ಹಲವಾರು ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಅರುಣ್ ನಾಗೇಗೌಡ ರವರ ಮಾರ್ಗದರ್ಶನದಲ್ಲಿ, ಉಪ್ಪಿನಂಗಡಿ ಪೊಲೀಸ್ ಉಪನಿರೀಕ್ಷಕರಾದ ಕೌಶಿಕ್ ರವರ ನೇತೃತ್ವದ, ಹೆಚ್.ಸಿ 685 ಪ್ರಶಾಂತ್ ರೈ, ಹೆಚ್.ಸಿ 1028 ಗಣೇಶ್, ಸಿಪಿಸಿ 1944 ಮ್ಯಾಥ್ಯೂ ವರ್ಗೀಸ್ ಹಾಗೂ ಸಿಪಿಸಿ 2283 ಶ್ರೀಶೈಲ ಎಂ.ಕೆ ರವರನ್ನು ಒಳಗೊಂಡ ವಿಶೇಷ ತಂಡವು ಕೇರಳದಲ್ಲಿ ದಸ್ತಗಿರಿ ಮಾಡಿ, ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.
ಆರೋಪಿತನ ವಿರುದ್ಧ ಪುತ್ತೂರು ನಗರ ಠಾಣೆ , ಉಪ್ಪಿನಂಗಡಿ ಠಾಣೆ, ಧರ್ಮಸ್ಥಳ ಠಾಣೆಗಳಲ್ಲಿ ಪ್ರಕರಣಗಳಿದ್ದು, ಅಲ್ಲದೇ ಕೇರಳ ರಾಜ್ಯದ ತ್ರಿಶೋರ್ ಜಿಲ್ಲೆಯಲ್ಲಿ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಸುಮಾರು 20 ಪ್ರಕರಣಗಳು ದಾಖಲಾಗಿರುತ್ತದೆ.


