Wednesday, June 24, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಅಕ್ರಮ ಕೂಟ ಸೇರಿ ಗಲಾಟೆ ಪ್ರಕರಣ; 6 ಮಂದಿಯನ್ನು ಬಂಧಿಸಿದ ಧರ್ಮಸ್ಥಳ ಪೊಲೀಸರು

ಬೆಳ್ತಂಗಡಿ : ಅಕ್ರಮ ಕೂಟ ಸೇರಿ ಗಲಾಟೆ ಪ್ರಕರಣ; 6 ಮಂದಿಯನ್ನು ಬಂಧಿಸಿದ ಧರ್ಮಸ್ಥಳ ಪೊಲೀಸರು

- Advertisement -
- Advertisement -

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ಪಾಂಗಳ ಕ್ರಾಸ್ ನಲ್ಲಿ ಆ.6 ರಂದು ಸಂಜೆ ಯೂಟ್ಯೂಬರ್ ಮೇಲೆ ಹಲ್ಲೆ ಮಾಡಿದ ಪ್ರಕರಣ ಬಳಿಕ 7:15 ರ ಸುಮಾರಿಗೆ ಉಜಿರೆ ಮಹೇಶ್ ಶೆಟ್ಟಿ ತಿಮರೋಡಿ ಬಳಗ ಮತ್ತು ಧರ್ಮಸ್ಥಳ ಭಕ್ತರ ಗುಂಪಿನ ನಡುವೆ ಅಕ್ರಮ ಕೂಟ ಸೇರಿ ಗಲಾಟೆ ಹಲ್ಲೆ ಮಾಡಿದ ಪ್ರಕರಣ ಸಂಬಂಧ ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಸಮರ್ಥ ಆರ್ ಗಾಣಿಗೇರ ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ  ಸುಮೊಟೋ(BNS), 2023 (U/s-189(2),191(2),132,324(6),190) ಅಡಿಯಲ್ಲಿ ಆ.6 ರಂದು ರಾತ್ರಿ 27 ಮಂದಿ ಸೇರಿದಂತೆ ಇತರರ ಮೇಲೆ ಪ್ರಕರಣ ದಾಖಲಾಗಿತ್ತು.

ಪ್ರಕರಣ ಸಂಬಂಧ ಧರ್ಮಸ್ಥಳ ಪೊಲೀಸರು ಆ.9 ರಂದು ಪದ್ಮಪ್ರಸಾದ್, ಸುಹಾಸ್, ಗುರುಪ್ರಸಾದ್, ಶಶಿಕುಮಾರ್, ಕಲಂದರ್, ಚೇತನ್ ನನ್ನು ಬಂಧಿಸಿ ಸಂಜೆ ಬೆಳ್ತಂಗಡಿ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದ್ದು. 6 ಮಂದಿಗೂ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು. ಆ.11 ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಲು ಆದೇಶಿಸಿದೆ.

- Advertisement -

Latest News

error: Content is protected !!