Thursday, June 4, 2026
Homeತಾಜಾ ಸುದ್ದಿಸಿಸಿಬಿ ನೋಟಿಸ್ ಬಗ್ಗೆ ಫೇಸ್ ಬುಕ್ ನಲ್ಲಿ ಆ್ಯಂಕರ್ ಅನುಶ್ರೀ ಪತ್ರಿಕಾ ಪ್ರಕಟಣೆ

ಸಿಸಿಬಿ ನೋಟಿಸ್ ಬಗ್ಗೆ ಫೇಸ್ ಬುಕ್ ನಲ್ಲಿ ಆ್ಯಂಕರ್ ಅನುಶ್ರೀ ಪತ್ರಿಕಾ ಪ್ರಕಟಣೆ

- Advertisement -
- Advertisement -

ಮಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ತಮಗೆ ಸಿಸಿಬಿಯಿಂದ ನೋಟಿಸ್ ಬಂದಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ನಟಿ ಅನುಶ್ರೀ ಫೇಸ್ ಬುಕ್ ನಲ್ಲಿ ಸ್ಪಷ್ಟನೆಯನ್ನು ನೀಡಿದ್ದಾರೆ. ಇಂದು ಸಂಜೆ ಅಂದ್ರೆ (ದಿನಾಂಕ 24 ಸೆಪ್ಟಂಬರ್ ಗುರುವಾರ) ನನಗೆ ಮಂಗಳೂರಿನ ಸಿಸಿಬಿ ಕಛೇರಿಯಿಂದ ವಿಚಾರಣೆಗೆ ಹಾಜರಾಗಲು ನೋಟಿಸ್ ಜಾರಿ ಮಾಡಿದ್ದಾರೆ. ನಾಳೆ (ಸೆಪ್ಟಂಬರ್ 25 ಶುಕ್ರವಾರ) ನಾನು ಬೆಳಗ್ಗೆ 11 ಗಂಟೆಗೆ ಸ್ವತಃ ನಾನೇ ಮಂಗಳೂರಿಗೆ ತೆರಳಿ ವಿಚಾರಣೆಗೆ ಹಾಜರಾಗುತ್ತೇನೆ ಎಂದು ನಿನ್ನೆ ರಾತ್ರಿ ಫೇಸ್ ಬುಕ್ ನಲ್ಲಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಅಲ್ಲದೇ ಇದು ಬರೀ ವಿಚಾರಣೆಯ ಸೂಚನೆಯಾಗಿದ್ದು, ಮಾಧ್ಯಮಗಳಲ್ಲಿ ನಾನು ನಟಿಸಿದ ಸಿನಿಮಾವನ್ನು ಬಳಸಿ ನನ್ನನ್ನು ಅಪರಾಧಿ ಎಂಬಂತೆ ತೋರಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ಪ್ರಕರಣದಲ್ಲಿ ನನ್ನ ಪಾತ್ರವೇನೂ ಇಲ್ಲ. ವಿಚಾರಣೆಗೆ ಕರೆದ ಕೂಡಲೇ ನಾನು ಅಪರಾಧಿ ಅಲ್ಲ ಅನ್ನೋದು ನಿಮಗೆ ತಿಳಿದಿದೆ. ಪೋಲಿಸರ ವಿಚಾರಣೆಗೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ. ಮಾಧ್ಯಮಗಳಲ್ಲಿ ಬರುತ್ತಿರುವ ವಿಚಾರ ನೋಡಿ ನನ್ನ ಕುಟುಂಬಕ್ಕೆ ತುಂಬಾ ನೋವಾಗಿದೆ. ಹಾಗಾಗಿ ಅತಿಯಾದ ಪ್ರಚಾರವು ಸತ್ಯವನ್ನು ದಾರಿ ತಪ್ಪಸಬಾರದು ಅನ್ನೋದು ನನ್ನ ಕಾಳಜಿ ಅಂತಾ ಅನುಶ್ರೀ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!