- Advertisement -
- Advertisement -
ಮುಂಬೈ: ಕಳೆದ ವರ್ಷದ ನವೆಂಬರ್‌ನಲ್ಲಿ ಮುಂಬೈನ ನ್ಯಾಯವಾದಿ ಅಜಯ ಶ್ರೀವಾಸ್ತವ ಅವರು 11.20 ಲಕ್ಷ ರೂ. ನೀಡಿ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಪೂರ್ವಜರ ಮನೆಯನ್ನು ಖರೀದಿಸಿದ್ದರು. ಇದೀಗ ಈ ಮನೆಯನ್ನು ಸನಾತನ ಶಾಲೆಯಾಗಿ ಪರಿವರ್ತಿಸುವ ಕುರಿತು ವಿವರಣೆಯನ್ನು ನೀಡಿದ್ದಾರೆ.
ದಾವೂದ್ ತನ್ನ ಬಾಲ್ಯವನ್ನು ಮಹಾರಾಷ್ಟ್ರದ ರತ್ನಗಿರಿಯಲ್ಲಿರುವ ಮನೆಯಲ್ಲಿ ಕಳೆದಿದ್ದು, 1980ರಲ್ಲಿ ಆ ಮನೆಯಲ್ಲಿ ದಾವೂದ್ ವಾಸವಿದ್ದ. ನಂತರ ಅವರ ಸಹೋದರಿಯರ ಪೈಕಿ ಒಬ್ಬರು ಅಲ್ಲಿ ವಾಸವಿದ್ದರು ಆದರೆ ಅವರು ಅಸುನೀಗಿದ ಬಳಿಕ ಅಲ್ಲಿ ಯಾರೂ ವಾಸಿಸುತ್ತಿರಲಿಲ್ಲ.
2020ರ ನವೆಂಬರ್ ನಲ್ಲಿ ಆ ಮನೆಯನ್ನು ಸ್ಮಗ್ಲರ್ಸ್ ಆ್ಯಂಡ್ ಫಾರಿನ್ ಎಕ್ಸ್‌ಚೇಂಜ್ ಮ್ಯಾನಿ ಪ್ಯುಲೇಟರ್ಸ್ ಕಾಯ್ದೆ ವ್ಯಾಪ್ತಿಯಲ್ಲಿ ಹರಾಜು ಹಾಕಲಾಗಿತ್ತು. ಅಜಯ್ ಅವರು ದಾವೂದ್ ಇಬ್ರಾಹಿಂನ ಪೂರ್ವಜರ ಮನೆ ಖರೀದಿಸಿದ್ದರು
- Advertisement -